ಕರಾವಳಿವೈರಲ್ ನ್ಯೂಸ್

ಬಿಜೆಪಿ ಸಚಿವನಿಗೆ ತುರಿಕೆ ಪುಡಿ ಎರಚಿ ಅಪರಿಚಿತ ವ್ಯಕ್ತಿ ಪರಾರಿ, ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಬಿಜೆಪಿ ಸಚಿವರೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ತುರಿಕೆ ಪುಡಿ ಎರಚಿ ಪರಾರಿಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತುರಿಕೆಯ ಉರಿ ತಡೆಯಲಾರದೆ ಮಧ್ಯಪ್ರದೇಶ ಸರ್ಕಾರದ ಸಚಿವ ಬ್ರಜೇಂದ್ರ ಸಿಂಗ್‌ ಯಾದವ್ ಸಾರ್ವಜನಿಕವಾಗಿ ಖುರ್ತಾ ತೆಗೆದು ಬಾಟಲಿ ನೀರಿನಿಂದ ಮೈ ತೊಳೆದುಕೊಂಡಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮಧ್ಯಪ್ರದೇಶದ ಮುಂಗೋಲಿ ಗ್ರಾಮದ ಮೂಲಕ ಬಿಜೆಪಿ ವಿಕಾಸ್ ರಥಯಾತ್ರೆ ವೇಳೆ ಸಾರ್ವಜನಿಕ ಸಭೆಯೊಂದರಲ್ಲಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ತುರಿಕೆ ಪುಡಿ ಎರೆಚಿದ್ದಾರೆ. 

‘ನಾವು ಕಾಂಗ್ರೆಸ್ಸಿಗರನ್ನು ಕೆಟ್ಟವರೆಂದುಕೊಂಡಿದ್ದೆವು. ಆದರೆ, ನೀವು (ಬಿಜೆಪಿಗರು) ಕಾಂಗ್ರೆಸ್‌ಗಿಂತ ಕೆಟ್ಟವರು, ನಮಗೆ ಸರಿಯಾದ ರಸ್ತೆ ಸೌಲಭ್ಯ ಕಲ್ಪಿಸುವಲ್ಲಿ ನೀವು ವಿಫಲರಾಗಿದ್ದೀರಿ. ನಾವು ನಿಮಗೆ ಮತ ಹಾಕುವುದಿಲ್ಲ’ ಎಂದು ಸ್ಥಳೀಯರು ಘೋಷಣೆ ಕೂಗಿದ್ದಾರೆ. ಎರಡು ದಿನಗಳ ಹಿಂದೆ ವಿಕಾಸ ರಥವು ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾಗುತ್ತಿದ್ದಾಗ ಹಾಳಾದ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಯಾತ್ರೆಯ ನೇತೃತ್ವ ವಹಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ದೇವೇಂದ್ರ ವರ್ಮಾ ಮತ್ತು ಗ್ರಾಮದ ಮಾಜಿ ಸರಪಂಚ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಪ್ರದೇಶದಲ್ಲಿ ಸರ್ಕಾರ 3 ಕಿ.ಮೀ ರಸ್ತೆಯನ್ನು ಮಂಜೂರು ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು.

Related posts

ಕಮಿಷನ್ ಗಾಗಿ ಪೋಸ್ಟಿಂಗ್ ಮಾಡಿದ್ರಾ ಸಿಎಂ ಪುತ್ರ..? ಏನಿದು ಆರೋಪ? ಇಲ್ಲಿದೆ ವೈರಲ್ ವಿಡಿಯೋ

ಶಾಲೆಗೆ ರಜೆ ಬೇಕೆಂದು ನೀರಿಗೆ ಇಲಿ ಪಾಷಾಣ ಹಾಕಿದನಾ ವಿದ್ಯಾರ್ಥಿ..? ಮುಂದೇನಾಯ್ತು..?

ಸುಳ್ಯದ ವಿವಾಹಿತ ಮಹಿಳೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣ, ಗಂಡ ಸೇರಿದಂತೆ 5 ಮಂದಿಗೆ ನ್ಯಾಯಾಂಗ ಬಂಧನ