ನ್ಯೂಸ್ ನಾಟೌಟ್ : ಸಹ ನಟಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ನಟ ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿಕೊಂಡಿದ್ದಾರೆ.
ಮನು ವಿರುದ್ಧ ಕೇಸ್ ದಾಖಲಾದಾಗ ಆಡಿಯೋವೊಂದು ಬಾರಿ ವೈರಲ್ ಆಗಿತ್ತು. ಆ ರೀತಿ ಮಾತನಾಡುವಂತೆ ಪ್ರಚೋದನೆ ಮಾಡಿದ್ದರು ವಿನಹ ನಾನಾಗಿಯೇ ಆ ರೀತಿ ಮಾತನಾಡಿದ್ದಲ್ಲ ಎಂದು ಮಡೆನೂರು ಮನು ಜೈಲಿನಿಂದ ಆಚೆ ಬಂದ ಬಳಿಕ ಹೇಳಿಕೊಂಡಿದ್ದರು.
ಇದೀಗ ನಟ ಶಿವರಾಜ್ ಕುಮಾರ್ ಅವರನ್ನ ನೇರವಾಗಿ ಭೇಟಿ ಮಾಡಿ, ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ನಟ ಮಡೆನೂರು ಮನು. ಅಲ್ಲದೇ ತಮ್ಮ ʻಕುಲದಲ್ಲಿ ಕೀಳ್ಯಾವುದೋʼ ಸಿನಿಮಾವನ್ನ ಮತ್ತೆ ಬಿಡುಗಡೆ ಮಾಡುವುದಕ್ಕೆ ಕೇಳಿಕೊಂಡಿದ್ದಾರೆ.ಈ ವೇಳೆ ನಟ ಶಿವರಾಜ್‌ಕುಮಾರ್ ದೊಡ್ಡತನ ಮೆರೆದಿದ್ದಾರೆ. ಮಡೆನೂರು ಮನುಗೆ ಒಳ್ಳೆಯದಾಗಲಿ, `ಒಳ್ಳೆಯ ಟೈಟಲ್‌ನ ಸಿನಿಮಾ ರಿಲೀಸ್ ಮಾಡಿ. ಕುಲದಲ್ಲಿ ಯಾರೂ ಕೀಳಲ್ಲ, ಮೇಲಲ್ಲ. ಯಾರೇ ಬೈದ್ರೂ, ಹೊಗಳಿದ್ರು ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ’ ಎಂದು ಹೇಳಿದ್ದಾರೆ.
ಇನ್ನು ಜೈಲಿನಿಂದ ಹೊರ ಬಂದ ಬಳಿಕ ನಟ ಮಡೆನೂರು ಮನು ಫಿಲ್ಮ್ ಚೇಂಬರ್‌ಗೂ ಭೇಟಿ ನೀಡಿ ತಮ್ಮ ಮೇಲೆ ಹೇರಿದ್ದ ಬ್ಯಾನ್ ತೆರುವುಗೊಳಿಸಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಲು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಹೊಸ ಸಿನಿಮಾಗಾಗಿ ಬೇಡಿ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ ಮಡೆನೂರು ಮನು. ತಮ್ಮ 2ನೇ ಸಿನಿಮಾಗಾಗಿ ಫೋಟೋಶೂಟ್ ಮಾಡಿಸಿರುವ ಮನು ಸದ್ಯದಲ್ಲಿಯೇ ಶೂಟಿಂಗ್ ಕೂಡಾ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.