ನ್ಯೂಸ್ ನಾಟೌಟ್: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸ್ಯ ನಟ ಮಡೆನೂರು ಮನುವನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ನಟನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇದೇ ಕೇಸ್ಗೆ ಸಂಬಂಧಿಸಿದಂತೆ ರಾತ್ರಿಯಿಡೀ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತೀವ್ರ ವಿಚಾರಣೆ ಮಾಡಿದ್ದಾರೆ. ಸಂತ್ರಸ್ತೆ ನೀಡಿದ ಆರೋಪದಂತೆ ಖಾಸಗಿ ವೀಡಿಯೋ ಬಗ್ಗೆ ತನಿಖೆ ನಡೆಸಿದ್ದಾರೆ. ಡ್ರಿಂಕ್ಸ್ ಮಾಡಿಸಿ ಪ್ರಜ್ಞೆ ತಪ್ಪಿಸಿ ಖಾಸಗಿ ವಿಡಿಯೋ ಮಾಡಿದ್ದಾರಾ ಅಂತಲೂ ಪೊಲೀಸರು ತನಿಖೆ ನಡೆಸಿದ್ದಾರೆ.
ಆದರೆ, ಮಡೆನೂರು ಮನು ಮೊಬೈಲ್ ಪರಿಶೀಲನೆ ಮಾಡಿದ ಮೇಲೆ ಮತ್ತು ಡಿಲೀಟ್ ಆಗಿರಬಹುದಾದ ವಿಡಿಯೋಗಳನ್ನು ರಿಟ್ರೈವ್ ಮಾಡಿದ ಬಳಿಕವೂ ಯಾವುದೇ ಖಾಸಗಿ ವಿಡಿಯೋ ಪತ್ತೆಯಾಗಿಲ್ಲ. ಇಬ್ಬರು ಜೊತೆಯಲ್ಲಿ ರಿಯಾಲಿಟಿ ಶೋ ಸೆಟ್ನಲ್ಲಿ ತೆಗೆಸಿಕೊಂಡಿರೋ ಪೋಟೋಗಳು ಪತ್ತೆಯಾಗಿದ್ದು ಬಿಟ್ಟರೇ ಅಶ್ಲೀಲವಾದಂತಹ, ಇಬ್ಬರು ಖಾಸಗಿಯಾಗಿರೋ ಯಾವುದೇ ಪೋಟೋ ಹಾಗೂ ವೀಡಿಯೋ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಸಂತ್ರಸ್ತೆಗೆ ಮತ್ತೆ ನೊಟೀಸ್ ನೀಡಲು ಮುಂದಾಗಿದ್ದಾರೆ.
ಖಾಸಗಿ ವಿಡಿಯೋ ಇರೋದು ಹೇಗೆ ಗೊತ್ತಾಯ್ತು? ನಿಮಗೆ ಆ ವಿಡಿಯೋ ಯಾವಾಗದರೂ ತೋರಿಸಿದ್ರಾ? ಯಾವ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ರು? ಹೀಗೆ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಕೊಡಲು ಪೊಲೀಸರು ನೋಟಿಸ್ ನೀಡುವುದಕ್ಕೆ ಮುಂದಾಗಿದ್ದಾರೆ.
ಒಂದೇ ಮಂಟಪದಲ್ಲಿ ಹಿಂದೂ ಮತ್ತು ಮುಸ್ಲಿಂ ಜೋಡಿಗಳ ವಿವಾಹ..! ಮಳೆ ತಂದ ಅವಾಂತರ..!
ಮಂಗಳೂರು: ಚೂರಿಯಿಂದ ಇರಿದು ವ್ಯಕ್ತಿಯ ಹತ್ಯೆ..! ಮದುವೆ ವಿಚಾರಕ್ಕೆ ಗಲಾಟೆ..!