ನ್ಯೂಸ್ ನಾಟೌಟ್: ಮಡೆನೂರು ಮನು ಅತ್ಯಾಚಾರ ಅರೋಪ ಪ್ರಕರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದ್ದೆ. ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಬೆನ್ನಲ್ಲೇ ಆದೇ ನಟಿ ಕಿರುತೆರೆ ನಟ ಅಪ್ಪಣ್ಣ ಮೇಲೆ ಕಿರುಕುಳ ಅರೋಪ ಮಾಡಿದ್ದಾರೆ. ಈಗ ಮಡೆನೂರು ಮನು ಪರ ವಕೀಲೆ ಶಾರದಾ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಾಗೇ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನಟ ಮಡೆನೂರು ಮನು ಇರಬೇಕಾಗಿದೆ ಎಂದಿದ್ದಾರೆ.
“ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಕಾಲತ್ತು ಫೈಲ್ ಮಾಡಿದ್ದಾರೆ. ಸಾಕ್ಷಾಧಾರಗಳನ್ನು ಕೋರ್ಟ್‌ಗೆ ಸಬ್ಮಿಟ್ ಮಾಡುತ್ತೇನೆ. ಮನು ಜೊತೆ ನಿತಂತರ ಸಂಪರ್ಕದಲ್ಲಿದ್ದೇವೆ. ಮಡೆನೂರು ಮನು ಹೀರೋ ಆಗಿ ನಟಿಸಿದ್ದಾರೆ. ಆ ಸಿನಿಮಾಗೆ ಒಳ್ಳೆದಾಗಬಾರದು ಅನ್ನೋ ಉದ್ದೇಶದಿಂದ ಈ ರೀತಿ ಮಾಡಿದಾರೆ.
ಬೇಕು ಅಂತ ಕೆಲವರು ಈ ರೀತಿ ಮಾಡಿದ್ದಾರೆ. ದೂರಿನಲ್ಲೇ ಕೆಲವು ಗೊಂದಲಗಳು ಎದ್ದು ಕಾಣುತ್ತದೆ. ಕೆಲವು ದಾಖಲೆಗಳನ್ನು ನನಗೆ ನೀಡಿದ್ದಾರೆ ಅದನ್ನ ನ್ಯಾಯಾಧೀಶರಿಗೆ ಒಪ್ಪಿಸಿದ್ದೇನೆ. ಸೋಮವಾರದ ನಂತರ ಉತ್ತರ ಸಿಗುತ್ತೆ” ಎಂದು ವಕೀಲೆ ಹೇಳಿಕೆ ನೀಡಿದ್ದಾರೆ.
ಐದು ದಿನಗಳ ಕಾಲ ಮಡೆನೂರು ಮನುಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮೇ 27 ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿ ಎಂದು ಬೆಂಗಳೂರಿನ 6 ನೇ ACJM ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು ಪೊಲೀಸರು. ಪೊಲೀಸ್ ಕಸ್ಟಡಿಗೆ ಪಡೆದು ಮಹಜರ್ ಗೆ ಮಡೆನೂರು ಮನು ನನ್ನು ಕರೆದೊಯ್ದಿದ್ದಾರೆ.