ಕರಾವಳಿಕೊಡಗುಸುಳ್ಯ

ಮದೆನಾಡು: ಪ್ರಾಕೃತಿಕ ವಿಕೋಪ ಎದುರಿಸಲು ಪೊಲೀಸರಿಂದ ತಾಲೀಮು..! ಬೆಟ್ಟ-ಗುಡ್ಡ ಹತ್ತಿ ಇಳಿದು ಭರ್ಜರಿ ಸಾಹಸ

ನ್ಯೂಸ್ ನಾಟೌಟ್: ಮಳೆಗಾಲ ಶುರುವಾಯಿತೆಂದರೆ ಕೊಡಗಿನಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ವರ್ಷ ಪ್ರವಾಹದಿಂದ ಎಷ್ಟೆಲ್ಲ ನಷ್ಟ ಸಂಭವಿಸಿ ಜೀವ ಹಾನಿಯಾಯಿತು ಅನ್ನುವ ದೃಶ್ಯಗಳು ಇನ್ನೂ ಕಣ್ಣ ಮುಂದಿದೆ. ಇಂತಹ ಸಂದರ್ಭದಲ್ಲಿ ಅನಾಹುತವನ್ನು ಎದುರಿಸಲು ಕೊಡಗು ಪೊಲೀಸ್ ಸರ್ವ ರೀತಿಯ ತಯಾರಿಯನ್ನು ಮಾಡಿಕೊಂಡಿದೆ. ಅಪಾಯ ಎದುರಾದರೆ ಏನೆಲ್ಲ ಮಾಡಬೇಕು ಅನ್ನುವುದನ್ನು ತಾಲೀಮು ನಡೆಸಿ ತೋರಿಸಿಕೊಟ್ಟಿದೆ.

30 ಮಂದಿ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ಕೊಡಗು ಜಿಲ್ಲಾ ಪೊಲೀಸ್ ವಿಪತ್ತು ನಿರ್ವಹಣಾ ತಂಡದಿಂದ ಮದೆನಾಡು ಗ್ರಾಮ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ನಡೆಸುವ ಬಗ್ಗೆ ಅಭ್ಯಾಸ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನೇತೃತ್ವದಲ್ಲಿ ನಡೆದ ಅಭ್ಯಾಸ ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪವಿಭಾಗ ಸಹಾಯಕ ಎಸ್.ಪಿ, ಆರ್.ಪಿ.ಐ. ಡಿಎಆರ್ ಮಡಿಕೇರಿ ಹಾಗೂ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Related posts

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿ..! 10ನೇ ತರಗತಿ ವಿದ್ಯಾರ್ಥಿನಿ ಸಾವು..!

ಮಕ್ಕಳ ರಸ್ತೆ ರಿಪೇರಿ ವಿಡಿಯೋ ವೈರಲ್ ಹಿನ್ನೆಲೆ: ಜಾಲತಾಣದಲ್ಲಿ ಹರಿಯಬಿಟ್ಟವರ ವಿರುದ್ಧ ಶಿಕ್ಷಣಾಧಿಕಾರಿಗಳಿಗೆ ದೂರು

15 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿದೆ ಒಕ್ಕಲಿಗ ಗೌಡ ಸಮುದಾಯ ಭವನ, ಡಿಸೆಂಬರ್ 26ಕ್ಕೆ ಶಿಲಾನ್ಯಾಸ ಕಾರ್ಯಕ್ರಮ,  ಜಗದ್ಗುರು ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗಿ