ದೇಶ-ವಿದೇಶಶಿಕ್ಷಣ

ಮದರಸಾ ಶಿಕ್ಷಣದಲ್ಲಿ ಸಂಸ್ಕೃತ ಕಡ್ಡಾಯ..? ಈ ಬಗ್ಗೆ ಮದರಸಾ ಮಂಡಳಿ ಅಧ್ಯಕ್ಷರು ಹೇಳಿದ್ದೇನು..?

ನ್ಯೂಸ್ ನಾಟೌಟ್: ಉತ್ತರಾಖಂಡದ ಮದರಸಾ ಮಂಡಳಿಯು, ರಾಜ್ಯದಲ್ಲಿರುವ ಸುಮಾರು 400 ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸಂಸ್ಕೃತ ಶಿಕ್ಷಣವನ್ನು ಕಲಿಸಲು ಮುಂದಾಗಿದೆ. ಈ ಯೋಜನೆಗೆ ರಾಜ್ಯ ಸಂಸ್ಕೃತ ಇಲಾಖೆಯೊಂದಿಗೆ ತಿಳಿವಳಿಗೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಯನ್ನಿಟ್ಟಿದೆ.

‘ನಾವು ಕೆಲವು ಸಮಯದಿಂದ ಈ ಯೋಜನೆ ಜಾರಿಗೆ ಯೋಚಿಸುತ್ತಿದ್ದೇವೆ. ರಾಜ್ಯ ಸರ್ಕಾರದಿಂದ ನಮಗೆ ಅನುಮೋದನೆ ದೊರೆತರೆ ನಾವು ಅದನ್ನು ಕಾರ್ಯಗತಗೊಳಿಸುತ್ತೇವೆ. ಅರೇಬಿಕ್, ಸಂಸ್ಕೃತ ಎರಡೂ ಪ್ರಾಚೀನ ಭಾಷೆಗಳು. ಮದರಸಾದಲ್ಲಿ ಅರೇಬಿಕ್ ಜೊತೆಗೆ ಸಂಸ್ಕೃತ ಕಲಿಯುವ ಆಯ್ಕೆ ನೀಡಿದರೆ ಅದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಉತ್ತರಾಖಂಡದ ಮದರಸಾ ಮಂಡಳಿ ಅಧ್ಯಕ್ಷ ಮುಪ್ತಿ ಶಾಮೂನ್ ಖಾಸ್ಮಿ ಹೇಳಿದ್ದಾರೆ.

ಮದರಸಾ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣದ ಜೊತೆಗೆ ಸರಿಸಮಾನ ಮಾಡುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಉದ್ದೇಶದ ಅನ್ವಯ ಈ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ ಎಂದು ಖಾಸ್ಮಿ ಹೇಳಿದ್ದಾರೆ. ಮೂಲಗಳ ಪ್ರಕಾರ ಸಂಸ್ಕೃತದ ಜೊತೆಗೆ ಕಂಪ್ಯೂಟರ್ ಶಿಕ್ಷಣವನ್ನು ಕೂಡ ಮದರಸಾಗಳಲ್ಲಿ ಕಲಿಸಲು ಚಿಂತನೆ ನಡೆದಿದೆ.

Click

https://newsnotout.com/2024/10/ratan-tata-cremation-asses-in-arabbi-sea-kannada-news/

Related posts

ಮಟನ್ ಪೀಸ್‌ ಹೆಚ್ಚಿಗೆ ಹಾಕುವಂತೆ ಗ್ರಾಹಕನ ಕಿರಿಕ್..! ಕೈಯಲ್ಲಿದ್ದ ಮಟನ್ ಕತ್ತರಿಸುವ ಕತ್ತಿಯಿಂದ ತಲೆಗೆ ಹೊಡೆದ 16ರ ಬಾಲಕ..!

ಮಂಗಳೂರು ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆ! ಇಲ್ಲಿವೆ ಸಂಪೂರ್ಣ ಮಾಹಿತಿ

ಗರ್ಭಿಣಿ ಮೇಲೆ ನಾಯಿ ದಾಳಿ, ಸ್ಥಳದಲ್ಲೇ ಗರ್ಭಪಾತ..! ನಾಯಿ ಮಾಲೀಕನಿಗೆ 10 ಲಕ್ಷ ರೂ. ದಂಡ..!