Latestಕ್ರೀಡೆಕ್ರೀಡೆ/ಸಿನಿಮಾಬೆಂಗಳೂರು

ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಿಯೋದಿಂದ ಉಚಿತ ಇಂಟರ್ನೆಟ್..! 2000 ಬೂಸ್ಟರ್‌ ಸೆಲ್‌ ಗಳನ್ನು ಅಳವಡಿಸಿದ ಜಿಯೋ..!

535

ನ್ಯೂಸ್ ನಾಟೌಟ್: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಉಚಿತ ಸೇವೆ ಲಭ್ಯವಿದ್ದು, ಅದಕ್ಕಾಗಿಯೇ ಜಿಯೋ 2000 ಬೂಸ್ಟರ್‌ ಸೆಲ್‌ ಗಳನ್ನು ಅಳವಡಿಸಿದೆ ಎನ್ನಲಾಗಿದೆ.

ಪ್ರೇಕ್ಷಕರು ವೈಫೈ ಆನ್ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ, ಬರುವ ಒಟಿಪಿಯನ್ನು ಹಾಕಿದರೆ, ಉಚಿತ ಇಂಟರ್ನೆಟ್‌ ಪಡೆಯಬಹುದಾಗಿದೆ.

ಇಂದು (ಏ.10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ- ಡೆಲ್ಲಿ ಕ್ಯಾಪಿಟಲ್ಸ್ ನಡುವೆ 24ನೇ ಪಂದ್ಯ ನಡೆಯಲಿದೆ. ​ಸದ್ಯ ಈ ಐಪಿಎಲ್ ​ನಲ್ಲಿ 3 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಮೂರರಲ್ಲೂ ವಿಜಯ ಸಾಧಿಸಿ ಟಾಪ್ ​ನಲ್ಲಿದೆ. ಆರ್​ಸಿಬಿ 4 ಪಂದ್ಯಗಳನ್ನ ಆಡಿ ಒಂದರಲ್ಲಿ ಮಾತ್ರ ಸೋಲು ಕಂಡಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಮ್ಯಾಚ್ ಆಡಿದಾಗೆಲ್ಲಾ ಹೆಚ್ಚು ಬಾರಿ ಬೆಂಗಳೂರು ತಂಡವೇ ಜಯಗಳಿಸಿದೆ. ಆರ್ ​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಇದುವರೆಗೆ 31 ಐಪಿಎಲ್​ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ.

ಇದರಲ್ಲಿ ಆರ್​ಸಿಬಿ 19 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಡೆಲ್ಲಿ ತಂಡ ಕೇವಲ 11 ರಲ್ಲಿ ಜಯಗಳಿಸಿದೆ. ಇದರಲ್ಲಿ 12 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದಿವೆ.

19 ವರ್ಷದ ಯುವತಿ ಮೇಲೆ 7 ದಿನ 23 ಮಂದಿಯಿಂದ ಅತ್ಯಾಚಾರ..! ಇನ್ ಸ್ಟಾಗ್ರಾಮ್ ಸ್ನೇಹಿತರಿಂದಲೇ ಕೃತ್ಯ..!

See also  ರಾಮಕುಂಜ: ಭಾರೀ ಮಳೆಗೆ ಕಾರಿನ ಮೇಲೆ ಬಿದ್ದ ಮರ..! ನಾಲ್ವರು ಪ್ರಾಣಾಪಾಯದಿಂದ ಪಾರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget