ಸುಳ್ಯ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶ್ವಾಸಕೋಶ ದಿನಾಚರಣೆ

136

ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶ್ವಾಸಕೋಶ ದಿನಾಚರಣೆ (ಸೆ. 26 ) ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಇದರ ಅಧ್ಯಕ್ಷ ಡಾ | ಕೆ.ವಿ. ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾಲೇಜಿನ ಡೀನ್ ಡಾ| ನೀಲಾಂಬಿಕೆ ನಟರಾಜನ್ ಉಪಸ್ಥಿತರಿದ್ದರು. ಈ ಸಂದರ್ಭ ಶ್ವಾಸಕೋಶ ಪುನಃಶ್ಚೇತನ ಕೇಂದ್ರ ಹಾಗೂ ತಂಬಾಕು ವ್ಯಸನ ಮುಕ್ತ ಕೇಂದ್ರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.)ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಿದರು.

ಬಳಿಕ ಶ್ವಾಸಕೋಶ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಪ್ರೀತಿರಾಜ್ ಬಳ್ಳಾಲ್ ಶ್ವಾಸಕೋಶ ದಿನಾಚರಣೆಯ ಅಂಗವಾಗಿ ವಿಶೇಷ ಮಾಹಿತಿ ಹಂಚಿಕೊಂಡರು. ಹಾಗೂ ಶ್ವಾಸಕೋಶ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಅನಿರುದ್ಧ ಶ್ವಾಸಕೋಶ ಪುನಶ್ಚೇತನ ಕೇಂದ್ರದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಬಳಿಕ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಡಾ| ಪೂನಂ ತಂಬಾಕು ವ್ಯಸನ ಮುಕ್ತ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಡಾ| ಶಮಾ ಪ್ರಾರ್ಥಿಸಿ, ಡಾ| ಸುಶ್ಮಿತಾ ಸ್ವಾಗತಿಸಿದರು ಹಾಗೂ ಡಾಕ್ಟರ್ ಪ್ರೀತಿರಾಜ್ ಬಳ್ಳಾಲ್ ವಂದಿಸಿದರು. ಈ ಸಂದರ್ಭ ಎಲ್ಲಾ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು,ಪ್ರಾಧ್ಯಾಪಕರು ಬೋಧಕೇತರವೃಂದದವರು ಉಪಸ್ಥಿತರಿದ್ದರು.

See also  ಮೋದಿಗಾಗಿ ಸಿಂಗಾಪುರದಿಂದ ಹಾರಿ ಬಂದ ಸಂಪಾಜೆಯ ಯುವಕ..! ವಿಶೇಷ ಸಂದರ್ಶನದಲ್ಲಿ 'ನ್ಯೂಸ್‌ ನಾಟೌಟ್‌' ಜೊತೆಗೆ ಹೇಳಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget