ರಾಜ್ಯಶಿಕ್ಷಣಸುಳ್ಯ

ಲಂಡನ್ ಮೂಲದ ವಿಶ್ವ ಕೌಶಲ್ಯ ಮಂಡಳಿಯಿಂದ ಮಾನ್ಯತೆ, ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಸಂಭ್ರಮದ ಕ್ಷಣ

ನ್ಯೂಸ್ ನಾಟೌಟ್: ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ‘ವಿಶ್ವ ಕೌಶಲ್ಯ ಮಂಡಳಿ’ ಯಿಂದ ಮಾನ್ಯತೆ ಲಭಿಸಿದೆ. ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ವಿಶ್ವ ಕೌಶಲ್ಯ ಮಂಡಳಿ ( World Skill Council) ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಂಸ್ಥೆಯೊಂದಿಗಿನ ಸಹಯೋಗ ಪಡೆದಿರುವುದು ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಸಿಕ್ಕಿರುವ ಅತ್ಯಂತ ದೊಡ್ಡ ಗೌರವವಾಗಿದೆ.

ಭಾರತ ಸರ್ಕಾರದ ಅಭಿವೃದ್ಧಿ ಏಜನ್ಸಿಯಿಂದ ಪ್ರವರ್ತಿತ ಭಾರತ್ ಸೇವಕ ಸಮಾಜದ ಅಂಗೀಕೃತ ಸಂಸ್ಥೆಯಾಗಿರುವ ಈ ಸಂಸ್ಥೆಯು ತನ್ನ ಎಲ್ಲಾ ಕೋರ್ಸ್ ಗಳನ್ನು ಇನ್ನು ಮುಂದೆ ವಿಶ್ವ ಕೌಶಲ್ಯ ಮಂಡಳಿಯ ಸಹಯೋಗದೊಂದಿಗೆ ನಡೆಸಲಿದೆ. ಜ್ಞಾನದೀಪ ಸಂಸ್ಥೆಯಲ್ಲಿ ನಡೆಯುತ್ತಿರುವ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರಮಾಣ ಪತ್ರವು ಇನ್ನು ಮುಂದೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲಿದೆ ಅನ್ನೋದು ವಿಶೇಷ.

Click 👇

https://newsnotout.com/2024/06/film-chember-issue-banning-darshan-and-visiting
https://newsnotout.com/2024/06/darshan-and-gang-issue-today-future-decisions-have-been-decided
https://newsnotout.com/2024/06/darshan-mb-patil-kannada-news-agriculture-department

Related posts

ಸುಳ್ಯ – ಮಂಡೆಕೋಲು ಭಾಗಕ್ಕೆ ಹೊಸ ಬಸ್ ಸಂಚಾರ ಆರಂಭ, ದಿನಕ್ಕೆ ಎಷ್ಟು ಭಾರಿ ಸಂಚಾರ..? ಇಲ್ಲಿದೆ ಡಿಟೇಲ್ಸ್

ಪಂಜದಲ್ಲಿ ಅಕ್ರಮ ದನ ಸಾಗಾಟ, ಪಿಕಪ್‌ ವಾಹನ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಕಲ್ಲುಗುಂಡಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ