ಕ್ರೈಂದೇಶ-ಪ್ರಪಂಚ

ಲಂಡನ್‌ನಲ್ಲಿ ಭಾರತದ ವಿದ್ಯಾರ್ಥಿನಿ ಸಾವು..! ಏನಿದು ಪ್ರಕರಣ..?

ನ್ಯೂಸ್ ನಾಟೌಟ್: ಲಂಡನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ. ಸೈಕಲ್‌ ತುಳಿಯುತ್ತ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರಕ್‌ ಹರಿದು 33 ವರ್ಷದ ಚೆಯಿಸ್ತಾ ಕೊಚ್ಚಾರ್‌ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್‌ 19ರಂದು ಅಪಘಾತ ಸಂಭವಿಸಿದ್ದು, ಚೆಯಿಸ್ತಾ ಕೊಚ್ಚಾರ್‌ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದರು. ಚೆಯಿಸ್ತಾ ಕೊಚ್ಚಾರ್‌ ನಿವೃತ್ತ ಲೆಫ್ಟಿನೆಂಟ್‌ ಜನರಲ್‌, ಸೆಲ್ಲುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (COAI) ನಿರ್ದೇಶಕ ಡಾ.ಎಸ್‌.ಪಿ. ಕೊಚ್ಚಾರ್‌ ಪುತ್ರಿಯಾಗಿದ್ದಾರೆ. ಚೆಯಿಸ್ತಾ ಕೊಚ್ಚಾರ್‌ ಅವರು ಲಂಡನ್‌ಗೆ ತೆರಳುವ ಮೊದಲು ನೀತಿ ಆಯೋಗದಲ್ಲೂ ಕೆಲಸ ಮಾಡಿದ್ದರು. ಇವರು ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಉಪಯೋಗವಾಗಲಿಲ್ಲ ಎನ್ನಲಾಗಿದೆ.

Related posts

ನಡುರಸ್ತೆಯಲ್ಲೇ ಹೊತ್ತಿ ಉರಿದ ಸರ್ಕಾರಿ ಬಸ್..! ಬಸ್ ನೊಳಗಿದ್ದ 30 ಜನ ಬದುಕಿದ್ದೇಗೆ..?

ಆಕಾಶದಲ್ಲಿ ಹಾರುತ್ತಿರುವಾಗ ಪೈಲಟ್ ಗೆ ಹೃದಯಾಘಾತ, ಬಾಂಗ್ಲಾ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದೆಲ್ಲಿ?

ಪ್ರತಿಷ್ಠಿತ ಬ್ಯಾಂಕ್ ನ ಕೆಲಸ ಬಿಟ್ಟು ಈಕೆ ಕಳ್ಳತನಕ್ಕೆ ಇಳಿದದ್ದೇಕೆ..? ಕಿಲಾಡಿ ಕಳ್ಳಿಯ ಖತರ್ನಾಕ್ ಸ್ಟೋರಿ ಇಲ್ಲಿದೆ