ಕ್ರೈಂವೈರಲ್ ನ್ಯೂಸ್

‘ಲುಡೋ’ ಚಟಕ್ಕೆ ಬಿದ್ದ ಆಕೆ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದು ಏಕೆ? ಪತಿಗೆ ಬರೆದ ಆ ಪತ್ರದಲ್ಲೇನಿತ್ತು? ಜೂಜಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪತ್ನಿ ಬಗ್ಗೆ ಪತಿ ಹೇಳಿದ್ದೇನು?

ನ್ಯೂಸ್ ನಾಟೌಟ್: ಆನ್ ಲೈನ್ ಲೂಡೋ ಗೇಮ್ ನ ಚಟದಿಂದಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆನ್‌ಲೈನ್‌ ಜೂಜಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಗೃಹಿಣಿಯೊಬ್ಬರು ಗಂಡನಿಗೆ ಪಶ್ಚಾತ್ತಾಪದ ಪತ್ರ ಬರೆದಿಟ್ಟು ಇಬ್ಬರು ಮಕ್ಕಳ ಜತೆ ಮನೆ ಬಿಟ್ಟು ಹೋಗಿರುವ ಪ್ರಕರಣ ಮಹಾಲಕ್ಷ್ಮೀ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಏಳು ದಿನಗಳಿಂದ ನಾಪತ್ತೆಯಾಗಿರುವ ಗೃಹಿಣಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಪತ್ತೆಗೆ ಪತಿ ಹಾಗೂ ಪೊಲೀಸರು ಹರಸಾಹಸಪಡುತ್ತಿದ್ದಾರೆ ಎನ್ನಲಾಗಿದೆ.

ಆಕೆ ದಂಪತಿಗೆ ಆರು ವರ್ಷದ ಹೆಣ್ಣು ಮಗು, ಒಂದು ವರ್ಷದ ಗಂಡು ಮಗುವಿದೆ. ಆಕೆಯ ಪತಿ ನಗರದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಒಬ್ಬರೇ ಇರುತ್ತಿದ್ದ ಒಂದು ವರ್ಷದ ಹಿಂದೆ ಮೊಬೈಲ್‌ನಲ್ಲಿ’ಲುಡೋ’ ಗೇಮ್‌ ಆಡುವ ಅಭ್ಯಾಸ ಮಾಡಿಕೊಂಡಿದ್ದರು. ಕ್ರಮೇಣ ಅದು ಗೀಳಾಗಿ ಪರಿಣಮಿಸಿ ಹಣ ಕಟ್ಟಿ ಆಡುವುದನ್ನು ಆರಂಭಿಸಿದ್ದರು. ಇದರ ಫಲವಾಗಿ ಮನೆಯಲ್ಲಿಟ್ಟಿದ್ದ 50 ಸಾವಿರ ರೂಪಾಯಿ ನಗದು ಕಳೆದುಕೊಂಡಿದ್ದರು.

ಇದು ಖಾಲಿಯಾದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣವನ್ನೂ ಅಡವಿಟ್ಟು ಹಣ ಪಡೆದು ಜೂಜಿನ ಪಣ ಕಟ್ಟಿ 1.20 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಇದಾದ ಬಳಿಕ ಸಂಬಂಧಿಕರಿಂದ ಸಾಲವಾಗಿ ಪಡೆದಿದ್ದ 1.75 ಲಕ್ಷ ರೂಪಾಯಿ ಸೇರಿದಂಚೆ ಒಟ್ಟು 3.45 ಲಕ್ಷ ರೂಪಾಯಿ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿಹೋಗಿದ್ದರು. ಇಷ್ಟೆಲ್ಲಾ ಆದರೂ ಪತಿಗೆ ತಿಳಿದಿರಲಿಲ್ಲ.
ಪತ್ನಿಯ ಆನ್‌ಲೈನ್‌ ಜೂಜಿನ ವಿಚಾರ ಒಂದು ತಿಂಗಳ ಹಿಂದೆ ಪತಿಗೆ ಗೊತ್ತಾಗಿತ್ತು. ಈ ವೇಳೆ ಸಮಾಧಾನಪಡಿಸಿ ಬುದ್ಧಿವಾದ ಹೇಳಿದ್ದ ಪತಿ ಆನ್‌ಲೈನ್‌ ಜೂಜಿನ ಚಟ ಬಿಡುವಂತೆ ಹೇಳಿದ್ದು ಆಕೆ ಕೂಡ ಕಣ್ಣೀರು ಹಾಕಿ ಮುಂದೆ ತಪ್ಪು ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು ಎನ್ನಲಾಗಿದೆ.

ಈ ನಡುವೆ, ಪುನಃ ಮಾಧುರಿ ಮನೆಯಲ್ಲಿದ್ದ ಚಿನ್ನಾಭರಣ ಒತ್ತೆಯಿಟ್ಟು 1.20 ಲಕ್ಷ ರೂಪಾಯಿ ಜೂಜಿನಲ್ಲಿ ಕಳೆದಿದ್ದ ವಿಚಾರ ಜುಲೈ 19ರಂದು ಪತಿಗೆ ಗೊತ್ತಾಗಿತ್ತು. ಇದರಿಂದ ಸ್ವಲ್ಪ ಅಸಮಾಧಾನಗೊಂಡ ಅವರು ಆಕೆಯ ಪೋಷಕರಿಗೆ ವಿಷಯ ತಿಳಿಸಿ ಆನ್‌ಲೈನ್‌ ಜೂಜಿನ ಚಟ ಬಿಡುವಂತೆ ಹೇಳಿದ್ದರು.

ಆಗಸ್ಟ್‌ 8ರಂದು ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆತಂದು ಮನೆಗೆ ಬಿಟ್ಟು ಆಕೆಯ ಪತಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು 4.45ರ ಸುಮಾರಿಗೆ ವಾಪಸ್‌ ಬಂದಾಗ ಪತ್ನಿ ಹಾಗೂ ಮಕ್ಕಳು ಇರಲಿಲ್ಲ. ಬದಲಿಗೆ ಟೇಬಲ್‌ ಮೇಲೆ ಪತ್ನಿ ಬರೆದಿಟ್ಟಿದ್ದ ಪತ್ರ ಸಿಕ್ಕಿತ್ತು. ‘ದಯವಿಟ್ಟು ನನ್ನ ಕ್ಷಮಿಸಿ, ನನ್ನಿಂದೆಲ್ಲಾ ಲಾಸ್‌ ಆಗಿದೆ. ಮನೆಯಲ್ಲಿದ್ದ ದುಡ್ಡು ತೆಗೆದುಕೊಂಡು ಹೋಗ್ತಿದೀನಿ ” ಎಂದು ಬರೆಯಲಾಗಿತ್ತು. ಇದರಿಂದ ಆಘಾತಕ್ಕೆ ಒಳಗಾಗಿ ಪತ್ನಿಗೆ ಕರೆ ಮಾಡಿದರೂ ಮೊಬೈಲ್‌ ಸ್ವಿಚ್‌ ಆಫ್‌ ಬರುತ್ತಿತ್ತು. ಅದೇ ದಿನ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಬೆಂಗಳೂರಿನಲ್ಲಿ ಮಹಿಳೆಯನ್ನು 30 ಪೀಸ್ ಮಾಡಿ ಬರ್ಬರ ಹತ್ಯೆ, ಸಿಂಗಲ್ ಡೋರ್ ಪ್ರಿಡ್ಜ್ ನಿಂದ ಹೊರ ಬರುತ್ತಿತ್ತು ದುರ್ನಾತ..!

ಶರಣಾಗತಿಯಾದ ನಕ್ಸಲ್ ಲತಾ ಟೀಂನಲ್ಲಿದ್ದ ರವೀಂದ್ರ ಮಿಸ್ಸಿಂಗ್..? ವಿಕ್ರಂಗೌಡ ಎನ್‍ ಕೌಂಟರ್ ಬಳಿಕ ಟೀಂ ತೊರೆದಿದ್ದ ರವೀಂದ್ರ ನಾಪತ್ತೆ..!

ಕಾರನ್ನು ಹೆಲ್ಮೆಟ್‌ ಧರಿಸಿ ಓಡಿಸುತ್ತಿರುವ ವ್ಯಕ್ತಿ! ಈತನ ವಿಚಿತ್ರ ವರ್ತನೆಗೆ ಕಾರಣ ಕೇಳಿ ಶಾಕ್ ಆದ ಜನ!