ಕರಾವಳಿಕ್ರೈಂಬೆಂಗಳೂರು

ಮಾಲ್‌‌‌ ನಲ್ಲಿ ನಿವೃತ್ತ ಶಿಕ್ಷಕನ ಅಸಭ್ಯ ವರ್ತನೆ ಬಗ್ಗೆ ಸಿಕ್ಕ ಮತ್ತಷ್ಟು ಸ್ಪೋಟಕ ಮಾಹಿತಿಗಳೇನು ..? 45 ಸಿಸಿ ಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಶಾಕ್..!

181

ನ್ಯೂಸ್ ನಾಟೌಟ್ : ಲುಲು ಮಾಲ್‌‌‌ನಲ್ಲಿ (Lulu Mall) ಹಿರಿ ವಯಸ್ಸಿನ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಬಗೆ ವಿಡಿಯೋ ವಯರಲ್ ಆಗಿತ್ತು ಮತ್ತು ಆತನ ವಿರುದ್ಧ ಪ್ರಕರಣ ದಾಖಲಾದ ನಂತರ ಆತ ಕೋರ್ಟ್ ಗೆ ಹಾಜರಾಗಿದ್ದ, ಈಗ ಆತ ಕೇವಲ ಒಬ್ಬ ಮಹಿಳೆಯ ಜೊತೆ ಮಾತ್ರವಲ್ಲ ಹಲವರ ಜೊತೆ ಅಸಬ್ಯವಾಗಿ ವರ್ತಿಸಿದ ವಿಚಾರ ಬಯಲಾಗಿದೆ.

ಮಹಿಳೆಯ (Woman) ಜೊತೆ ನಡೆದುಕೊಂಡ ಅಸಭ್ಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ವಿಡಿಯೋ (CCTV Video) ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಮಾಗಡಿ ರೋಡ್ ಪೊಲೀಸರು ಈತ ನಿವೃತ್ತ ಶಿಕ್ಷಕ ಅಶ್ವತ್ಥ್ ನಾರಾಯಣ ಎಂದು ಪತ್ತೆ ಹಚ್ಚಿದ್ದರು. ಈಗ ಪೊಲೀಸರು (Police) ಆರೋಪಿಯ ಇನ್ನಷ್ಟು ವಿಡಿಯೋಗಳನ್ನು ಬಯಲು ಮಾಡಿದ್ದಾರೆ.

ಲುಲು ಮಾಲ್‌‌‌ನಲ್ಲಿ ಆರೋಪಿ ನಿವೃತ್ತ ಶಿಕ್ಷಕ ಅಶ್ವತ್ಥ ನಾರಾಯಣ ಏನೇನೆಲ್ಲಾ ಮಾಡಿದ್ದ ಅನ್ನೋದನ್ನ ಪೊಲೀಸರು ಸುಮಾರು 45ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಮೂಲಕ ಪರಿಶೀಲಿಸಿದ್ದಾರೆ. ಆತ ಸುಮಾರು 3 ಗಂಟೆಗಳ ಕಾಲ ಮಾಲ್‌‌‌ನಲ್ಲಿದ್ದು, ಅಲ್ಲಿ ಇನ್ನೂ 7-8 ಮಹಿಳೆಯರ ಜೊತೆಗೂ ಹೀಗೇ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ.
ಮಹಿಳೆಯರು ನಿಂತಿದ್ದರೆ ಹಿಂದಿನಿಂದ ಹೋಗಿ ಎಲ್ಲೆಂದರಲ್ಲಿ ಮುಟ್ಟಿ ಕಾಟ ಕೊಟ್ಟಿದ್ದ. ಈ ವಿಡಿಯೋಗಳನ್ನ ನೋಡಿದ ಮೇಲೆ ಪೊಲೀಸರು ಆತ ಈ ಹಿಂದೆ ಕೆಲಸ ಮಾಡ್ತಿದ್ದ ಶಾಲೆಯಲ್ಲೂ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವಿಡಿಯೋ ಬಯಲಿಗೆ ತಂದಿದ್ದು ಯಶ್ವಂತ್ ಅನ್ನೋ ಯುವಕ. ಇನ್ಮುಂದೆ ಯಾರೇ ಇಂತಹ ಕೃತ್ಯವೆಸಗಿದರೆ ಪೊಲೀಸರಿಗೆ ಮಾಹಿತಿ ನೀಡಲು ಯುವಕ ಯಶ್ವಂತ್ ಕೋರಿದ್ದಾರೆ.

ಸದ್ಯ ಆರೋಪಿ ನಿವೃತ್ತ ಶಿಕ್ಷಕ ಅಶ್ವತ್ಥ್ ನಾರಾಯಣ್ ಜಾಮೀನಿನ ಮೇಲೆ ಹೊರಬಂದಿದ್ದು, ಸಿಸಿ ಕ್ಯಾಮರಾದ ಪರಿಶೀಲನೆ ಬಳಿಕ ನೊಟೀಸ್ ಕೊಟ್ಟು ಅಶ್ವತ್ ನಾರಾಯಣ್ ಹೇಳಿಕೆ ದಾಖಲಿಸಲು ಮಾಗಡಿ ರೋಡ್ ಪೊಲೀಸರು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.

See also  ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು..! ವೈದ್ಯರು ತಪಾಸಣೆ ನಡೆಸಿ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದಿದ್ದರು..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget