ನ್ಯೂಸ್ ನಾಟೌಟ್ : ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆ ಮನೆಯ ಕಾರು ಹಾಗೂ ಬೈಕ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಬಳಿ ನಡೆದಿದೆ.
ಆರೋಪಿಯನ್ನು ರಾಹುಲ್ ಎಂದು ಗುರುತಿಸಲಾಗಿದ್ದು, ಈತ ಓರ್ವ ರೌಡಿಶೀಟರ್ ಎಂದು ತಿಳಿದುಬಂದಿದೆ. ಕಳೆದ 9 ವರ್ಷಗಳಿಂದ ಯುವತಿಯೋರ್ವಳನ್ನು ಈತ ಪ್ರೀತಿಸುತ್ತಿದ್ದ. ರೌಡಿಶೀಟರ್ ರಾಹುಲ್ ನ ಹಿನ್ನೆಲೆ ಗೊತ್ತಿದ್ದರೂ ಸಹ ಯುವತಿ ಲವ್ ಮಾಡುತ್ತಿದ್ದಳು. ಆದ್ರೆ, ಕೆಲ ತಿಂಗಳಿಂದ ರಾಹುಲ್ ನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡು ರಾಹುಲ್, ಪ್ರಿಯತಮೆ ಮನೆ ಬಳಿ ಹೋಗಿ ಆಕೆಯ ಕಾರು, ಬೈಕ್ಗಳಿಗೆ ಬೆಂಕಿ ಹಚ್ಚಿದ್ದಾನೆ.
ಕೆಲ ತಿಂಗಳಿಂದ ಯುವತಿ ರಾಹುಲ್ ನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ರಾಹುಲ್, ಸಹಚರರ ಜೊತೆ ಯುವತಿ ಮನೆ ಬಳಿ ಬಂದು ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದೆಂದು ಎಚ್ಚರಿಕೆ ನೀಡಿದ್ದಾನೆ. ಅಲ್ಲದೇ ಪ್ರೇಯಸಿ ತಂದೆಗೆ ಸೇರಿದ 2 ಕಾರು, 1 ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ಆಕೆಯ ಕುಟುಂಬಸ್ಥರಿಗೆ ಭಯ ಬೀಳಿಸುವ ಉದ್ದೇಶದಿಂದ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ನಿನ್ನೆ(ಫೆಬ್ರವರಿ 23) ರಾತ್ರಿ ಸುಮಾರು ನಾಲ್ಕು ಹುಡುಗರು ಬಂದಿದ್ದಾರೆ. ಲಾಂಗ್ ,ಮಚ್ಚಿನಿಂದ ಸೆಕ್ಯೂರಿಟಿಗೆ ಹೆದರಿಸಿ ಯುವತಿಯ ಪೋಟೊ ತೋರಿಸಿ ಆಕೆಯ ಕಾರು ಯಾವುದು ಎಂದು ಕೇಳಿದ್ದಾರೆ. ಬಳಿಕ ಒಳಗಡೆ ಹೋಗಿ ಕಾರಿನ ಗ್ಲಾಸ್ ಹೊಡೆದು ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಒಂದು ಕಾರಿಗೆ ಬೆಂಕಿ ಹಚ್ಚಿದ ನಂತರ ಮತ್ತೊಂದು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ಸುಮಾರು 45 ಕುಟುಂಬಗಳು ವಾಸ ಮಾಡುತ್ತಿವೆ. ತಕ್ಷಣ ಇದನ್ನ ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಬೆಂಕಿ ನಿಯಂತ್ರಿಸಿದ್ದಾರೆ. ಘಟನೆಯಲ್ಲಿ ಎರಡು ಕಾರುಗಳು ಸುಟ್ಟು ಭಸ್ಮಯವಾಗಿವೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.