ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಪ್ರೀತಿಸಿದ ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ​ಮೇಲ್ ಮಾಡಿದ ಧಾರಾವಾಹಿ ನಟ..! ನಟನ ವಿರುದ್ಧ ಪ್ರಕರಣ ದಾಖಲು

225

ನ್ಯೂಸ್ ನಾಟೌಟ್: ಕಿರುತೆರೆಯ ಸೀರಿಯಲ್​ಗಳಲ್ಲಿ ನಟಿಸಿರುವ ವರುಣ್​ ಆರಾಧ್ಯ ಎಂಬಾತನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಪ್ರೀತಿಸಿದ ಯುವತಿಯ ಖಾಸಗಿ ಫೋಟೋ ಇರಿಸಿಕೊಂಡು ಬ್ಲ್ಯಾಕ್​ಮೇಲ್ ಮಾಡಿದ್ದಾನೆ ಎನ್ನಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪಶ್ಚಿಮ ವಿಭಾಗದ CEN​ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಟಿ ಕಾಯ್ದೆ ಅನ್ವಯ ವರುಣ್ ಆರಾಧ್ಯ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವರುಣ್ಯ ಆರಾಧ್ಯ ನಂತರ ಬ್ರೇಕಪ್ ಮಾಡಿಕೊಂಡಿದ್ದ. ಈಗ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎನ್ನಲಾಗಿದೆ. ಬ್ರೇಕಪ್​ ಆದರೂ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿದ ಆರೋಪದಲ್ಲಿ ಕೇಸ್​ ದಾಖಲಾಗಿದೆ.

ಜಾಲತಾಣದ ಮಾರ್ಕೆಟಿಂಗ್ ‌ಮಾಡ್ತಿದ್ದ ಯುವತಿಯನ್ನು ಪ್ರೀತಿಸಿ ವಂಚನೆ ಮಾಡಿದ್ದಾನೆ ಎಂಬ ಆರೋಪ ಎದುರಾಗಿದೆ. ಸುಮಾರು ‌ನಾಲ್ಕು ವರ್ಷಗಳ ಕಾಲ ಪರಸ್ಪರ ‌ಪ್ರೀತಿ‌ಯಲ್ಲಿದ್ದ ಜೋಡಿಯ ನಡುವೆ ನಂತರ ಬಿರುಕು ಮೂಡಿತು. ಖಾಸಗಿ ಫೋಟೋವನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

2023ರಲ್ಲಿ ವರುಣ್ ಮೊಬೈಲ್​ ‌ನೋಡುವಾಗ ಯುವತಿಗೆ‌ ಫೋನ್ ​ನಲ್ಲಿ‌ ಮತ್ತೊಬ್ಬ ‌ಯುವತಿಯ ಜೊತೆಗಿದ್ದ ಖಾಸಗಿ ‌ಫೋಟೋ ಪತ್ತೆ ಆದವು. ಈ ಬಗ್ಗೆ ಮಾಹಿತಿ ಬಹಿರಂಗ ಮಾಡದಂತೆ ಬೆದರಿಕೆ ಹಾಕಿದ್ದಾನೆ. ಖಾಸಗಿ ಫೋಟೋ ಬಗ್ಗೆ ಬಾಯಿಬಿಡದಂತೆ ಮಾಜಿ‌ ಪ್ರಿಯತಮೆಗೆ ಧಮ್ಕಿ ಹಾಕಿದ್ದಾನೆ.
ಬಳಿಕ ಪ್ರೀತಿಸಿದ ಯುವತಿಗೆ ತನ್ನ ಜೊತೆಯಲ್ಲಿರುವ ಖಾಸಗಿ ‌ಫೋಟೋ ಕಳುಹಿಸಿ‌ ಬ್ಲ್ಯಾಕ್​ಮೇಲ್ ಮಾಡಿದ್ದಾನೆ.ಈ ದೂರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Click

https://newsnotout.com/2024/09/8-husband-as-man-allegation-on-wife-but-wife-says-only-four-highcourt-verdict/
https://newsnotout.com/2024/09/police-shock-during-illegal-alcho-kannada-news-viral-video-andra/
https://newsnotout.com/2024/09/arun-kumar-puttila-and-case-high-court-stay-on-investigation-kannada-news/
https://newsnotout.com/2024/09/mangaluru-eletric-scooter-kannada-news-notice-issue-mangaluru-corporation/
https://newsnotout.com/2024/09/electric-scooter-ola-kannada-news-viral-news-fire-on-showroom-police-arrested/
https://newsnotout.com/2024/09/food-corporation-of-india-kannada-news-job-vacency-all-over-india/
See also  ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು ಕೊಂದು ಮರಕ್ಕೆ ನೇತು ಹಾಕಿದ ಮಹಿಳೆ..! ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget