ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪ್ರೇಮಿಯನ್ನು ವಿವಾಹವಾಗಲು ನಿರಾಕರಿಸಿದ್ದಕ್ಕೆ ಮನೆಯವರ ಊಟಕ್ಕೆ ವಿಷ ಹಾಕಿದ ಯುವತಿ..! ಅಪ್ಪ-ಅಮ್ಮ ಸೇರಿ ಕುಟುಂಬದ 13 ಮಂದಿ ಸಾವು..!

221

ನ್ಯೂಸ್ ನಾಟೌಟ್: ತಾನು ಇಷ್ಟಪಟ್ಟ ಹುಡುಗನ ಜತೆ ವಿವಾಹವಾಗಲು ನಿರಾಕರಿಸಿದ ಮನೆಯವರ ಊಟಕ್ಕೆ ಯುವತಿಯೊಬ್ಬಳು ವಿಷಹಾಕಿ ಜೈಲು ಸೇರಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನದ ಖೈರಪುರ ಸಮೀಪದ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಆಗಸ್ಟ್ 19 ರಂದು ಈ ಘಟನೆ ಸಂಭವಿಸಿದ್ದು, ಭಾನುವಾರ (ಅ.6ರಂದು) ಯುವತಿಯನ್ನು ಪೊಲೀಸರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಬಂಧಿಸಿದ್ದಾರೆ.

ಯುವತಿ ಯುವಕನೊಬ್ಬನನ್ನು ಇಷ್ಟಪಡುತ್ತಿದ್ದಳು. ಆತನೊಂದಿಗೆ ವಿವಾಹವಾಗುವ ನಿಟ್ಟಿನಲ್ಲಿ ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಆದರೆ ಅಪ್ಪ- ಅಮ್ಮ ಸೇರಿದಂತೆ ಕುಟುಂಬಸ್ಥರೆಲ್ಲರೂ ಯುವತಿಯ ಪ್ರೀತಿಯನ್ನು ನಿರಾಕರಿಸಿದ್ದಾರೆ.

ಇದೇ ಕೋಪದಲ್ಲಿದ್ದ ಯುವತಿ ತನ್ನ ಪ್ರಿಯಕರನ ಜೊತೆ ಸಂಚು ರೂಪಿಸಿ ಮನೆಯರೆಲ್ಲರಿಗೂ ಊಟದಲ್ಲಿ ವಿಷ ಬೆರೆಸಿದ್ದಾಳೆ. ಊಟ ಸೇವಿಸಿದ ಕುಟುಂಬದ 13 ಮಂದಿಗೆ ಕೆಲವೇ ನಿಮಿಷದಲ್ಲಿ ಅನಾರೋಗ್ಯ ಕಾಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಯುವತಿಯ ಅಪ್ಪ – ಅಮ್ಮ ಸೇರಿದಂತೆ ಕುಟುಂಬದ 13 ಮಂದಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಿದಾಗ 13 ಮಂದಿ ವಿಷಪೂರಿತ ಆಹಾರದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುದೀರ್ಘವಾಗಿ ತನಿಖೆ ನಡೆಸಿದಾಗ ಮನೆಯಲ್ಲಿ ರೊಟ್ಟಿ ಮಾಡಲು ಬಳಸುವ ಗೋಧಿಗೆ ಯುವತಿ ಮತ್ತು ಆಕೆಯ ಪ್ರಿಯಕರ ವಿಷ ಹಾಕಿರುವುದು ಗೊತ್ತಾಗಿದೆ.

Click

https://newsnotout.com/2024/10/big-boss-tamil-vijay-sethupathikannda-news-video/
https://newsnotout.com/2024/10/vinesh-pogat-election-win-kannada-news-viral-news/
https://newsnotout.com/2024/10/cake-and-food-poisoning-order-cancel-viral-news/
https://newsnotout.com/2024/10/baby-and-perents-pilgrims-kannada-news-12-years-matter-ka/
https://newsnotout.com/2024/10/political-kannada-news-viral-news-vinesh-pogat-kannada-news-hariyan/
https://newsnotout.com/2024/10/theef-kannada-news-different-way-of-approch-viral-bengaluru/

See also  27 ವರ್ಷಗಳ ನಂತರ ರಾಷ್ಟ್ರರಾಜಧಾನಿಯ ಗದ್ದುಗೆ ಹಿಡಿದ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಗೆ ಸಿಎಂ ಪಟ್ಟ..! ಪ್ರಮಾಣವಚನ ಸ್ವಿಕಾರ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget