ದೇಶ-ವಿದೇಶವಿಡಿಯೋವೈರಲ್ ನ್ಯೂಸ್

ನಾಲಗೆಯ ಮೇಲೆ ಪ್ರಿಯತಮೆಯ ಹೆಸರು ಹಚ್ಚೆ ಹಾಕಿಸಿಕೊಂಡ ಪಾಗಲ್ ಪ್ರೇಮಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಕೆಲ ಯುವಕರು ತಾವು ಪ್ರೀತಿಸುವ ಹುಡುಗಿಯ ಹೆಸರನ್ನು ಎದೆ ಭಾಗದಲ್ಲಿ ಅಥವಾ ಕೈನಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಪಾಗಲ್ ಪ್ರೇಮಿಯೊಬ್ಬ ತನ್ನ ಗರ್ಲ್‌ಫ್ರೆಂಡ್‌ ಹೆಸರನ್ನು ನಾಲಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ತಾವು ಪ್ರೀತಿಸುವ ಜೀವದ ಹೆಸರನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ಭಂಡ ಧೈರ್ಯದ ಯುವಕ ತನ್ನ ಲವರ್‌ ಹೆಸರನ್ನು ನಾಲಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಟ್ಯಾಟೂ ಆರ್ಟಿಸ್ಟ್‌ ಅಭಿಷೇಕ್‌ (abhishek_ahirwar6934) ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ನಾಲಿಗೆಯ ಮೇಲೆ ನಿಖಿತಾ ಎಂದು ಪ್ರಿಯತಮೆಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವ ದೃಶ್ಯ ಇದೆ.

ಅಕ್ಟೋಬರ್‌ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 29.5 ಮಿಲಿಯನ್‌ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಈಗ ವೈರಲ್ ಆಗುತ್ತಿದೆ.

Click

https://newsnotout.com/2024/10/vishwa-hindu-parishad-and-arun-kumar-puttila-lkannada-news-d/
https://newsnotout.com/2024/10/union-bank-of-india-kannada-news-1500-jobs-are-there-d/
https://newsnotout.com/2024/10/kannada-news-railway-rajasthani-jaipura-october/
https://newsnotout.com/2024/10/bsnl-new-logo-kannada-news-introduced-network-kannada-news/
https://newsnotout.com/2024/10/mangaluru-parangipete-kannada-news-attack-viral-news/
https://newsnotout.com/2024/10/mangaluru-kannada-news-surathkal-kannada-news/
https://newsnotout.com/2024/10/mangaluru-kannada-news-helmet-kannada-news-mangaluru/

Related posts

ತಂದೆಯ ಜೊತೆಗಿನ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದೇನು? ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುದೇಕೆ?

ದಕ್ಷಿಣ ಕನ್ನಡದ ಶಾಲೆಗಳಲ್ಲಿ ಇನ್ನು ಶನಿವಾರದಂದು ಪೂರ್ಣ ದಿನದ ತರಗತಿ! ಸುಳ್ಯ ಬಿಇಒ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದದ್ದು ಏಕೆ? ಯಾವಾಗಿನಿಂದ ಈ ಆದೇಶ ಜಾರಿ?

ದೇಶಕ್ಕೆ ಕಾಲಿಡುವ ಮುನ್ನವೇ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಇಲ್ಲಿದೆ ಸಂಪೂರ್ಣ ಮಾಹಿತಿ