ಕ್ರೈಂವೈರಲ್ ನ್ಯೂಸ್

ಲವ್ವರ್ ಜೊತೆ ಸಿಕ್ಕಿ ಬಿದ್ದ ಪತ್ನಿಯನ್ನು ಜೀವಂತ ಸುಟ್ಟನಾ ಪತಿ..! ಲವ್ವರ್ ಬೆಂಕಿಯಿಂದ ಪಾರಾದದ್ದೇಗೆ..? ಇಲ್ಲಿದೆ ವಿಚಿತ್ರ ಲವ್ ಸ್ಟೋರಿ

257

ನ್ಯೂಸ್ ನಾಟೌಟ್: ಪತ್ನಿ ಪ್ರಿಯಕರನ ಜೊತೆಗಿನ ಆಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಗಂಡ ಕೆಲಸಕ್ಕೆ ತೆರಳುವ ವೇಳೆ ಲವರ್ ಜೊತೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನು ಗಂಡ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ನಡೆದಿದ್ದೇ ಘನಘೋರ ಘಟನೆ ನಡೆದಿದೆ.

ಬರೇಲಿ(ನ.19) ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗಿ ಗಂಡನ ಜೊತೆ ಸಂಸಾರ ನಡೆಸುತ್ತಿದ್ದ ಪತ್ನಿ ಸದ್ದಿಲ್ಲದೆ ಮತ್ತೊಬ್ಬ ವ್ಯಕ್ತಿ ಜೊತೆ ಚಕ್ಕಂದ ಶುರುವಿಟ್ಟುಕೊಂಡಿದ್ದಳು. ಕದ್ದು ಮುಚ್ಚಿ ನಡೆಯುತ್ತಿದ್ದ ಸರಸ ಪತಿಯ ಅನುಮಾನ ಹೆಚ್ಚಿಸಿದೆ. ಪರಿಶೀಲನೆ ಇಳಿದ ಪತಿ ರೆಡ್‌ಹ್ಯಾಂಡ್ ಆಗಿ ಪತ್ನಿಯನ್ನು ಹಿಡಿದಿದ್ದಾಳೆ.
ಲವರ್ ಜೊತೆ ಸರಸವಾಡುತ್ತಿದ್ದ ಸಮಯದಲ್ಲೇ ಪತಿ ಎಂಟ್ರಿಕೊಟ್ಟು ಇಬ್ಬರನ್ನು ಹಿಡಿದಿದ್ದಾನೆ. ಲವರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮೋಸದಾಟಕ್ಕೆ ಆಕ್ರೋಶಗೊಂಡ ಪತಿ ಸ್ಥಳದಲ್ಲೇ ಜೀವಂತವಾಗಿ ಪತ್ನಿಯನ್ನು ಸುಟ್ಟ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ನೆಪಲ್ ಸಿಂಗ್ ಹಾಗೂ ಅಂಜಲಿ ದಾಂಪತ್ಯದಲ್ಲಿ ಹೆಚ್ಚಿನ ಸಮಸ್ಯೆಗಳಿರಲಿಲ್ಲ. ಗಂಡನ ಕೆಲಸಕ್ಕೆ ತೆರಳುತ್ತಿದ್ದ, ಪತ್ನಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ಆದರೆ ಬರು ಬರುತ್ತಾ ಪತ್ನಿಯ ನಡೆ ಅನುಮಾನ ತರಿಸಿದೆ. ಈ ಕುರಿತು ಕೆಲ ಬಾರಿ ಸೂಚನೆಯನ್ನೂ ನೀಡಿದ್ದಾನೆ.
ಆದರೆ ಅಷ್ಟರಲ್ಲೇ ಪತ್ನಿಗೆ ತನ್ನ ಲವರ್ ಜೊತೆಗಿನ ಸಾಂಗತ್ಯ ಗಾಢವಾಗಿದೆ. ಕಣ್ಣಾಮುಚ್ಚಾಲೆ ಆಟ ಮಂಚ ಹಂಚಿಕೊಳ್ಳುವ ವರೆಗೂ ತಲುಪಿತ್ತು. ಪ್ರತಿ ದಿನ ಸರಸ ಸಲ್ಲಾಪಗಳು ಜೋರಾಯಿತು. ಪತ್ನಿಯ ಮೇಲೆ ಅನುಮಾನಗೊಂಡಿದ್ದ ಪತಿ, ಪತ್ತೆ ಹಚ್ಚಲು ಮುಂದಾಗಿದ್ದಾನೆ. ದಿಢೀರ್ ಕೆಲಸದಿಂದ ವಾಪಸ್ ಆಗಿದ್ದಾನೆ. ಶನಿವಾರ(ನ. 18) ರಾತ್ರಿ ಪಕ್ಕದ ಹೊಲದಲ್ಲಿ ಪತ್ನಿ ಒಣ ಹುಲ್ಲಿನ ಮೇಲೆ ಮಲಗಿರುವುದನ್ನು ಪತಿ ನೋಡಿದ್ದಾನೆ. ಕೆರಳಿದ ಪತಿ ಒಣ ಹುಲ್ಲಿಗೆ ಬೆಂಕಿ ಹಚ್ಚಿ ತೆರಳಿದ್ದಾನೆ. ಇಬ್ಬರು ಮಲಗಿದ್ದರು ಎಂದು ಮತ್ತೆ ಗೊತ್ತಾಗಿದೆ. ಹೀಗಾಗಿ ಬೆಂಕಿ ಆವರಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿಲ್ಲ. ಒಂದೇ ಸಮನೆ ಬೆಂಕಿ ಧಗಧಹಿಸಲು ಆರಂಭಿಸಿದೆ. ಲವರ್ ಒಣ ಹುಲ್ಲಿನ ಮೇಲಿಂದ ಜಿಗಿದಿದ್ದಾನೆ. ಆದರೆ ಅಂಜಲಿಗೆ ಸಾಧ್ಯವಾಗಿಲ್ಲ. ಒಣಹುಲ್ಲಿನ ಒಳಗೆ ಕುಸಿದಿದ್ದಾಳೆ. ಬೆಂಕಿಯ ಜ್ವಾಲೆಯಲ್ಲಿ ಭಸ್ಮವಾಗಿದ್ದಾಳೆ ಎಂದು ವರದಿ ತಿಳಿಸಿದೆ.
ಗೊತಿಯಾ ಗ್ರಾಮದ 35 ವರ್ಷ ಮಹಿಳೆ ಅಂಜಲಿ ಕೊಲೆಯಾಗಿದ್ದಾಳೆ. ಅಂಜಲಿ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ನೆಪಲ್ ಸಿಂಗ್ ಬಂಧಿಸಿರುವ ಪೊಲೀಸರು ಘಟನೆಯ ಮಾಹಿತಿ ಪಡೆದಿದ್ದಾರೆ. ಇತ್ತ ಅಂಜಲಿ ಜೊತೆಗಿದ್ದ ವ್ಯಕ್ತಿ ಯಾರು ಅನ್ನೋದು ಬಹಿರಂಗವಾಗಿಲ್ಲ ಎನ್ನಲಾಗಿದೆ.

See also  ಮಂಗಳೂರು: ಇಂದಿರಾ ಕ್ಯಾಂಟೀನ್‌ ಬಳಿ ಬಸ್‌ ನಿರ್ವಾಹಕನ ಶವ ಪತ್ತೆ..! ಪ್ರಕರಣದ ಸುತ್ತ ಹಲವು ಅನುಮಾನ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget