Latestಕ್ರೈಂವಿಡಿಯೋವೈರಲ್ ನ್ಯೂಸ್

ಹೆತ್ತವರು ದುಬಾರಿ ಮೌಲ್ಯದ ಐಫೋನ್‌ ಕೊಡಿಸಲಿಲ್ಲವೆಂದು ಕೈ ಕೊಯ್ದುಕೊಂಡ 18ರ ಯುವತಿ..! ವಿಡಿಯೋ ವೈರಲ್

544

ನ್ಯೂಸ್‌ ನಾಟೌಟ್: ಬಿಹಾರದಲ್ಲೊಂದು ಘಟನೆ ನಡೆದಿದ್ದು, ಪೋಷಕರು (Parents) ಐಫೋನ್‌ ಕೊಡಿಸಿಲ್ಲವೆಂದು 18 ರ ಹರೆಯದ ಯುವತಿಯೊಬ್ಬಳು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಬಾಯ್‌ ಫ್ರೆಂಡ್‌ ಜೊತೆ ಮಾತನಾಡುವ ಸಲುವಾಗಿ ಆಕೆ ತನ್ನ ಪೋಷಕರ ಬಳಿ 1.5 ಲಕ್ಷ ಮೌಲ್ಯದ ಐಫೋನ್‌ ಕೊಡಿಸುವಂತೆ ಕೇಳಿದ್ದು, ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಆಕೆ ಕೋಪದಲ್ಲಿ ಬ್ಲೇಡ್‌ ನಿಂದ ಕೈ ಕೊಯ್ದುಕೊಂಡಿದ್ದಾಳೆ. ಈ ಕುರಿತ ವಿಡಿಯೋವೊಂದು ತಡವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಬಿಹಾರದ ಮುಂಗೇರ್‌ ಎಂಬಲ್ಲಿ ನಡೆದಿದ್ದು, ತನ್ನ ಹೆತ್ತವರು ದುಬಾರಿ ಬೆಲೆಯ ಐಫೋನ್‌ ಕೊಡಿಸಲು ನಿರಾಕರಿಸಿದ್ದಕ್ಕೆ ಮನನೊಂದ 18 ವರ್ಷ ವಯಸ್ಸಿನ ಯುವತಿಯೊಬ್ಬಳು ಕೈ ಕೊಯ್ದುಕೊಂಡಿದ್ದಾಳೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಯುವತಿ ತನ್ನ ಬಾಯ್‌ಫ್ರೆಂಡ್‌ ಜೊತೆ ಮಾತನಾಡುವ ಸಲುವಾಗಿ 1.5 ಲಕ್ಷ ಮೌಲ್ಯದ ಐಫೋನ್‌ ಕೊಡಿಸುವಂತೆ ಪೋಷಕರ ಬಳಿ ಕೇಳಿದ್ದಳು. ಮೂರು ತಿಂಗಳಿನಿಂದ ಆಕೆ ತನ್ನ ತಾಯಿಯ ಬಳಿ ಫೋನ್‌ ಕೊಡಿಸಿ ಎಂದು ಪೀಡಿಸುತ್ತಿದ್ದು, ಫೋನ್‌ ಕೊಡಿಸಿಲ್ಲ ಅಂದ್ರೆ ಬಾಯ್‌ ಫ್ರೆಂಡ್‌ ಜೊತೆ ಓಡಿ ಹೋಗುವುದಾಗಿ ಕೂಡಾ ಹೇಳಿದ್ದಳು.

ತಮ್ಮ ಬಳಿ ಅಷ್ಟು ಹಣ ಇಲ್ಲದಿದ್ದ ಕಾರಣ ಪೋಷಕರು ಆಕೆಗೆ ಫೋನ್‌ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಆಕೆ ಕೋಣೆಗೆ ಬೀಗ ಹಾಕಿ ಬ್ಲೇಡ್‌ ನಿಂದ ತನ್ನ ಎಡಗೈ ಮಣಿಕಟ್ಟನ್ನು ಕೊಯ್ದುಕೊಂಡಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಬಳಿಕ ಆಕೆ ಇನ್ನು ಮುಂದೆ ಇಂತಹ ಹುಚ್ಚು ಕೆಲಸಗಳನ್ನು ಮಾಡಲ್ಲ ಎಂದು ಭರವಸೆ ನೀಡಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಕರ್ನಾಟಕದ ವಿಜಯಪುರದಲ್ಲಿ ಕೇಳಿಬಂದ ಭಾರಿ ಶಬ್ದ..! ಭೂಕಂಪವೆಂದು ಬೆಚ್ಚಿದ ಜನ..!

ವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವು ವದಂತಿ..! ಆ ಒಂದು ವಿಡಿಯೋ ನೀಡಿದ ಸುಳಿವೇನು..?

See also  ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆ, ಕೊಲೆಯೆಂಬ ಶಂಕೆ, ತನಿಖೆಗೆ ಒತ್ತಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget