ನ್ಯೂಸ್ ನಾಟೌಟ್: ಯುವತಿಯೊಬ್ಬಳು ನಡು ರಾತ್ರಿಯಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆ ಸಂದರ್ಭದಲ್ಲಿ ಅಸಹಾಯಕ ತಂದೆ ಮಗಳ ಕಾಲಿಗೆ ಬಿದ್ದು, ದಯವಿಟ್ಟು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಗೋಗರೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಇಲ್ಲಿ ಅಪ್ಪ ತನಗೆ ಮಗಳು ಬೇಕೆಂದು ಬಯಸಿದರೆ, ಮಗಳು ಮಾತ್ರ ಹೆತ್ತು-ಹೊತ್ತು ಸಾಕಿ ತಂದೆ ತಾಯಿಯನ್ನೇ ಬಿಟ್ಟು ನೆನ್ನೆ ಮೊನ್ನೆ ಪರಿಚಯವಾದ ಯುವಕನೊಂದಿಗೆ ಓಡಿ ಹೋಗಲು ಮುಂದಾಗಿದ್ದಾಳೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಗಳು ತನ್ನ ಗೆಳೆಯನೊಂದಿಗೆ ನಡು ರಾತ್ರಿ ಓಡಿ ಹೋಗಲು ಯತ್ನಿಸಿದಾಗ, ಕಣ್ಣೀರಿಡುತ್ತಾ ಆಕೆಯ ಹಿಂದೆಯೇ ಬಂದ ತಂದೆ ಮಗಳ ಕಾಲಿಗೆ ಬಿದ್ದು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಬೇಡಿಕೊಂಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.
పరుగు సినిమాలో దృశ్యం.. తమిళనాడు లో ప్రత్యక్షం!
కన్న కూతురు ప్రేమించిన యువకుడితో వెళ్లిపోతుంటే వెళ్ళొదని ప్రద్యేయ పడుతున్న తండ్రి.. విడియో వైరల్#TamilNadu #Daughters #UANow #Parents pic.twitter.com/fzv51crOnO
— ఉత్తరాంధ్ర నౌ! (@UttarandhraNow) March 22, 2025
ತಮಿಳುನಾಡಿನಲ್ಲಿ ನಡೆದ ಘಟನೆಯ ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಶಾರ್ಟ್ ಫಿಲ್ಮ್ ಎಂಬುದು ತಿಳಿದು ಬಂದಿದೆ. ಈ ಕುರಿತ ವಿಡಿಯೋವನ್ನು UttarandhraNow ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ:ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿ..! ಇಬ್ಬರು ಪೊಲೀಸರಿಗೆ ಗಾಯ, ಆರೋಪಿ ಅರೆಸ್ಟ್..!