ನ್ಯೂಸ್ ನಾಟೌಟ್: 16 ವರ್ಷದ ಅಪ್ರಾಪ್ತ ಮಗಳೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ತನ್ನ 19 ವರ್ಷದ ಬಾಯ್ ಫ್ರೆಂಡ್ ಹಾಗೂ ಆತನ ಕಿರಿಯ ಸೋದರನ ಜೊತೆ ಸೇರಿಕೊಂಡು ತಾಯಿಯನ್ನು ಮಗಳು ಮುಗಿಸಿದ್ದಾಳೆ. ಹೈದರಾಬಾದ್ ನ ಜೆಡಿಮೆಟ್ಲಾ ಪ್ರದೇಶದ ಎನ್‌ಎಲ್‌ಬಿ ನಗರದಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ.
ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ 8 ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ 19 ವರ್ಷದ ಯುವಕನ ಪರಿಚಯವಾಗಿದೆ. ಬಳಿಕ ಆತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈ ವಿಷಯ ಯುವತಿಯ ತಾಯಿಗೆ ಗೊತ್ತಾಗಿದೆ. ತಾಯಿ, ಅಪ್ರಾಪ್ತ ಮಗಳು ಯುವಕನ ಜೊತೆ ಸಂಬಂಧ ಬೆಳೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮನೆಯಲ್ಲಿ ತಾಯಿ- ಮಗಳ ನಡುವೆ ಜಗಳಕ್ಕೆ ಕಾರಣವಾಗಿದೆ.
ಜೂನ್ 23 ರಂದು ಅಪ್ರಾಪ್ತ ವಿದ್ಯಾರ್ಥಿನಿಯ ತಾಯಿ ಅಂಜಲಿಯನ್ನು ಮಗಳೇ ಕೊಂದಿದ್ದಾಳೆ. ಈ ವೇಳೆ ಬಾಯ್ ಫ್ರೆಂಡ್ ಹಾಗೂ ಆತನ ಸೋದರ ಕೂಡ ಮನೆಯಲ್ಲಿದ್ದು ಮಹಿಳೆಯ ಕುತ್ತಿಗೆ ಹಿಸುಕಿದ್ದಾರೆ. ಬಳಿಕ ಐರನ್ ರಾಡ್ ನಿಂದ ಹೊಡೆದಿದ್ದಾರೆ. ಜೊತೆಗೆ ಚಾಕುವಿನಿಂದ ಅಂಜಲಿಗೆ ಇರಿದಿದ್ದಾರೆ. ಹೈದರಾಬಾದ್ ನ ಜೆಡಿಮೆಟ್ಲಾ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಭಿನಂದನ್ ವರ್ಧಮಾನ್ ನನ್ನು ಸೆರೆಹಿಡಿದಿದ್ದ ಪಾಕ್ ಯೋಧ ಎನ್ ಕೌಂಟರ್ ನಲ್ಲಿ ಸಾವು..! ಉಗ್ರರ ದಾಳಿ..!