ಕ್ರೈಂವೈರಲ್ ನ್ಯೂಸ್

7 ವರ್ಷದ ಮಗಳ ಮೇಲೆ ಪ್ರೇಮಿಗೆ ರೇಪ್ ಮಾಡಲು ತಾಯಿಯೇ ಅನುಮತಿ ಕೊಟ್ಟಳಾ..? ಮಹಿಳೆಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಹೇಳಿದ್ದೇನು? ಏನಿದು ವಿಕೃತ ಘಟನೆ?

ನ್ಯೂಸ್ ನಾಟೌಟ್ : ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ (Rape) ಎಸಗಲು ತನ್ನ ಪ್ರೇಮಿಗೆ (Lover) ಅವಕಾಶ ಕೊಟ್ಟ ಮಹಿಳೆಗೆ ಕೇರಳ (Kerala) ಕೋರ್ಟ್ 40 ವರ್ಷಮತ್ತು 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ಆದೇಶಿಸಿದೆ.

ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ತಿರುವನಂತಪುರಂನ (Thiruvananthapuram) ವಿಶೇಷ ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಆರೋಪಿ ಮಹಿಳೆಯನ್ನು ತಾಯ್ತನಕ್ಕೆ ಅವಮಾನ ಎಂದು ಪರಿಗಣಿಸಿದೆ. ಮಾತ್ರವಲ್ಲದೆ ಆಕೆ ಯಾವುದೇ ಕರುಣೆಗೆ ಅರ್ಹಳಲ್ಲ ಎಂದು ಘೋಷಿಸಿದ್ದು, ಗರಿಷ್ಠ ಶಿಕ್ಷೆಯನ್ನು ವಿಧಿಸುವುದಾಗಿ ಹೇಳಿದೆ. ಆಕೆ ದಂಡ ಪಾವತಿಸಲು ವಿಫಲಳಾದಲ್ಲಿ ಹೆಚ್ಚುವರಿ 6 ತಿಂಗಳ ಜೈಲು (Jail) ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ಅದೇಶಿಸಿದೆ.

ಪೋಕ್ಸೋ (POCSO) (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳಲ್ಲಿ ಹೆಚ್ಚಾಗಿ ತಾಯಂದಿರು ಕಾನೂನು ಪರಿಣಾಮಗಳನ್ನು ಎದುರಿಸುವುದು ಬಹಳ ವಿರಳ. ಈ ಘಟನೆ 2018ರ ಮಾರ್ಚ್‌ನಿಂದ 2019ರ ಸೆಪ್ಟೆಂಬರ್ ನಡುವೆ ನಡೆದಿತ್ತು. ಈ ಸಮಯದಲ್ಲಿ ಮಹಿಳೆ ತನ್ನ ಮಾನಸಿಕ ಅಸ್ವಸ್ಥ ಪತಿಯಿಂದ ಬೇರ್ಪಟ್ಟು, ಪ್ರಕರಣದ ಪ್ರಮುಖ ಆರೋಪಿಯಾದ ಶಿಶುಪಾಲನ್ ಜೊತೆ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಳು. ಆ ಸಂದರ್ಭ ಮಹಿಳೆಯ 7 ವರ್ಷದ ಕಿರಿಯ ಮಗಳು ಸಹ ಅವರೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ.

ಶಿಶುಪಾಲನ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಹಿನ್ನೆಲೆ ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿತ್ತು. ಇದರಲ್ಲಿ ಆಘಾತಕಾರಿ ವಿಚಾರವೆಂದರೆ 2018 ರಿಂದ 2019ರ ನಡುವೆ ಸಂತ್ರಸ್ತ ಬಾಲಕಿಯ ತಾಯಿಯ ಸಹಕಾರದಲ್ಲಿಯೇ ಶಿಶುಪಾಲನ್ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ತನಿಖೆಯ ಮೂಲಕ ಬಯಲಾಗಿದೆ.
ಇಷ್ಟು ಮಾತ್ರವಲ್ಲದೇ ಆತ ಸಂತ್ರಸ್ತೆಯ 11 ವರ್ಷದ ಮಲಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲಿಯವರೆಗೂ ಬಾಲಕಿಯರಿಗೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಎಲ್ಲೂ ಹೇಳಿಕೊಳ್ಳದಂತೆ ಬೆದರಿಸಲಾಗಿತ್ತು. ಬಳಿಕ ಬಾಲಕಿಯರು ತಮ್ಮ ಅಜ್ಜಿಮನೆಗೆ ಪರಾರಿಯಾಗಿದ್ದು, ಅಲ್ಲಿ ನಡೆದೆಲ್ಲಾ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವಿಚಾರ ಬಹಿರಂಗವಾದ ಬಳಿಕ ಶಿಶುಪಾಲನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿನ್ನೆಲೆ ಅತ್ಯಾಚಾರಕ್ಕೆ ಸಹಕರಿಸಿದ ತಾಯಿಗೆ ಮಾತ್ರವೇ ಇದೀಗ 40 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

https://newsnotout.com/2023/11/kantara-rishab-shetty-pragathi-shetty-acting/

ಘಟನೆಯನ್ನು ತಿಳಿದು ಗಾಬರಿಗೊಳಗಾದ ಅಜ್ಜಿ ಮಕ್ಕಳನ್ನು ಪಾಲನಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಕೌನ್ಸೆಲಿಂಗ್ ನಡೆಸಿದ ವೇಳೆ ಮಕ್ಕಳು ಘಟನೆಯನ್ನು ತಿಳಿಸಿದ್ದಾರೆ. ಮಹಿಳೆಯ ಮತ್ತೊಬ್ಬ ಪ್ರೇಮಿ ಕೂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದು ತಿಳಿದು ಬಂದಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

Related posts

ಉಡುಪಿ ಕೇಸ್ ರೀತಿಯಲ್ಲೆ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣದ ಮತ್ತೊಂದು ಪ್ರಕರಣ ಬಯಲು! ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ..! ಈ ಘಟನೆ ನಡೆದದ್ದು ಎಲ್ಲಿ?

ಮಡಿಕೇರಿ: ಕುಸಿಯುವ ಭೀತಿಯಲ್ಲಿ ಗ್ಲಾಸ್ ಬ್ರಿಡ್ಜ್ ..!, ವಿರೋಧಿಗಳ ಕುತಂತ್ರವೇ..? ಹೊಸ ಗ್ಲಾಸ್ ಬ್ರಿಡ್ಜ್ ಗೆ ಏನಿದು ಕಂಟಕ..? ಇಲ್ಲಿದೆ ಡಿಟೇಲ್ಸ್

ನಟಿಗೆ ಪ್ರಭಾವಿ ರಾಜಕಾರಣಿಯಿಂದ ಲೈಂಗಿಕ ಕಿರುಕುಳ ಆರೋಪ..! 3 ಐಪಿಎಸ್ ಅಧಿಕಾರಿಗಳು ಅಮಾನತ್ತು..!