ಕ್ರೈಂವೈರಲ್ ನ್ಯೂಸ್

ಸ್ನೇಹಿತ ಕೇಳಿದ ಎಂದು ಪ್ರೇಯಸಿಯನ್ನೇ ಗೆಳೆಯನ ಜೊತೆ ಹೋಗುವಂತೆ ಪೀಡಿಸಿದ ಆತ ಯಾರು? ತಾನು ತಂದಿದ್ದ ದಾರ ಕಟ್ಟಿ ಮದುವೆ ಆಯ್ತು ಎದ್ದಿದ್ದ ಗೆಳೆಯನಿಗೆ ಕಾದಿತ್ತು ಶಾಕ್! ಏನಿದು ವಿಚಿತ್ರ ಲವ್ ಸ್ಟೋರಿ..?

ನ್ಯೂಸ್ ನಾಟೌಟ್ : ಸ್ನೇಹಿತ ಕೇಳಿದ ಎನ್ನುವ ಕಾರಣಕ್ಕೆ ತಾನು ಪ್ರೀತಿಸುವ ಹುಡುಗಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಸ್ನೇಹಿತನನ್ನು ಮದುವೆ ಆಗುವಂತೆ ಪೀಡಿಸಿದ ಘಟನೆ ರಾಮನಗರದಲ್ಲಿ ವರದಿಯಾಗಿದೆ.

ರಾಮನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯ ಜೊತೆ ಮಂಜು ಪ್ರೀತಿ-ಪ್ರೇಮ ಎಂದು ಶುರುಮಾಡಿದ್ದ. ಆಕೆಯ ಜೊತೆಗಿರುವ ಫೋಟೋಗಳನ್ನು ತೆಗೆದುಕೊಂಡಿದ್ದ ಮಂಜು ಆ ಫೋಟೋಗಳನ್ನು ತನ್ನ ಸ್ನೇಹಿತ ರವಿಗೆ ತೋರಿಸಿ ತಾನೊಂದು ಹುಡುಗಿಯನ್ನು ಪಟಾಯಿಸಿದ್ದೇನೆ ಎಂದು ಹೇಳಿಕೊಂಡಿದ್ದ.

ಈ ವೇಳೆ ರವಿ ನಿನ್ನ ಗರ್ಲ್ ಫ್ರೆಂಡ್ ಅನ್ನು ತಾನು ಮದುವೆ ಮಾಡಿಕೊಳ್ತೇನೆ, ನೀನು ನನಗೆ ಬಿಟ್ಟುಕೊಡು ಎಂದು ಹೇಳಿದ್ದಾನೆ. ನೀನೇನು ನೋಡಲು ಚೆನ್ನಾಗಿದ್ದೀಯಾ ಎಷ್ಟು ಬೇಕಾದ್ರೂ ಹುಡುಗಿ ಪಟಾಯಿಸಬಹುದು. ನನಗೆ ನಿನ್ನ ಗರ್ಲ್ ಫ್ರಂಡ್ ಕೊಟ್ಟರೆ ಮದುವೆ ಆಗ್ತೀನಿ ಎಂದಿದ್ದನಂತೆ ರವಿ. ಆತನ ಮಾತಿಗೆ ಮರುಳಾಗಿದ್ದ ಮಂಜು ಸರಿ ತಗೋ ಮದುವೆ ಮಾಡಿಕೋ ಕಳುಹಿಸಿಕೊಡ್ತೇನೆ ಎಂದಿದ್ದ ಎಂದು ಪೊಲಿಸರ ತನಿಖೆಯಲ್ಲಿ ತಿಳಿದುಬಂದಿದೆ.

ಎಕ್ಸಾಂ ಅರ್ಧದಲ್ಲೇ ಬಿಟ್ಟು ತೆರಳಿದ್ದ ಯುವತಿ ಬಳಿಕ ಸೆಪ್ಟೆಂಬರ್ 19ರಂದು ವಿನಾಯಕ ನಗರದ ಆಂಜನೇಯ ದ್ವಾರದ ಬಳಿ ಭೇಟಿಯಾಗುವಂತೆ ಯುವತಿಗೆ ತಿಳಿಸಿದ್ದ. ಹೀಗಾಗಿ ಯುವತಿ ಬಿಕಾಂನ ಕೊನೆಯ ಎಕ್ಸಾಂ ಅರ್ಧಕ್ಕೆ ಬಿಟ್ಟು ಮಂಜು ಹೇಳಿದ ಸ್ಥಳಕ್ಕೆ ಬಂದಿದ್ದಳು. ಈ ವೇಳೆ ರವಿ ಜತೆ ತೆರಳಲು ಹೇಳಿದ ಯುವತಿಗೆ ಆಗಲ್ಲ ಎಂದದ್ದಕ್ಕೆ, ತನ್ನ ಜೊತೆಗಿರುವ ಫೋಟೊ ಬಹಿರಂಗ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದಾನೆ. ಆತನ ಬ್ಲ್ಯಾಕ್ ಮೇಲ್ ಗೆ ಹೆದರಿ ಯುವತಿ ರವಿ ಜತೆ ತೆರಳಿದ್ದಾಳೆ. ನಿರ್ಜನ ಪ್ರದೇಶಕ್ಕೆ ಯುವತಿ ಕರೆದುಕೊಂಡ ಹೋಗಿದ್ದ ರವಿ ಯುವತಿ ಕರೆದು ತಂದ 15‌ ನಿಮಿಷದಲ್ಲೇ ಮದುವೆ ಆಗಿದ್ದಾನೆ.

ತಾನು ತಂದಿದ್ದ ತಾಯತ ದಾರವನ್ನು ಆಕೆಗೆ ಕಟ್ಟಿ ಅದೇ ತಾಳಿ. ನಾನು ನಿನ್ನ ಜತೆ ಮದುವೆ ಆಗಿದ್ದೀನಿ,‌ ನಾನೇ‌ ನಿನ್ನ ಗಂಡ ಎಂದಿದ್ದಾನೆ. ತನ್ನ ಊರಲ್ಲಿ ಇದ್ದರೆ ಯುವತಿ ಮನೆಯವರು ಬರುವ ಭಯದಿಂದ ಸಂಜೆ ವೇಳೆ ಯುವತಿಯನ್ನು ಕರೆದುಕೊಂಡು ಚಾಮರಾಜನಗರ ನಗರಕ್ಕೆ ತೆರಳಿದ್ದ ಎನ್ನಲಾಗಿದೆ. ಅಲ್ಲಿ ತನ್ನ ಸಂಬಂಧಿಕರ ಮನೆಗೆ ತೆರಳಿ ಉಳಿದುಕೊಳ್ಳಲು ಜಾಗ ಕೇಳಿದ್ದ. ಆದರೆ ಯುವತಿ ಪರಿಸ್ಥಿತಿ ಕಂಡು ಸಂಬಂಧಿಕರು ಉಳಿಯಲು ಅವಕಾಶ ಮಾಡಿ ಕೊಡಲಿಲ್ಲ.

ಹೀಗಾಗಿ ಮತ್ತೆ ರಾತ್ರಿ ಯುವತಿಯನ್ನು ಚಾಮರಾಜನಗರದಿಂದ ತುಮಕೂರಿಗೆ ಕರೆದುಕೊಂಡು ಬಂದಿದ್ದ ರವಿ ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲಿಕನ ಬಳಿ ತೆರಳಿದ್ದ. ಬಹಳ ವರ್ಷದಿಂದ ಯುವತಿಯನ್ನು ಲವ್ ಮಾಡುತ್ತಿದ್ದೆ, ಮದುವೆ ಆಗಿದ್ದೀನಿ ಎಂದು ಹೇಳಿದ ಅಲ್ಲಿ ಯುವತಿಯನ್ನು ಬಲವಂತವಾಗಿ ಕೂಡಿ ಹಾಕಿದ್ದ. ಯುವತಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನದ ಹಿನ್ನೆಲೆಯಲ್ಲಿ ಮಂಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಈ ವೇಳೆ ಯುವತಿಯ ಫೊಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ಮಂಜು ಒಪ್ಪಿಕೊಂಡಿದ್ದ. ಜೊತೆಗೆ ರವಿಯ ಜೊತೆ ಕಳಿಸಿಕೊಟ್ಟ ಸಂಗತಿಯನ್ನೂ ಬಾಯಿ ಬಿಟ್ಟಿದ್ದ. ಮಾಹಿತಿ ದೊರೆತೊಡನೆ ರವಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಯುವತಿಯ ರಕ್ಷಿಸಿ ಹೆತ್ತವರಿಗೆ ಒಪ್ಪಿಸಿದ್ದಾರೆ.

ಐಜೂರು ಗ್ರಾಮದ ಮಂಜು(21), ರವಿ (33) ಬಂಧಿತ ಆರೋಪಿಗಳು. ಅವರು ಇವರಲ್ಲಿ ಮಂಜು ಎಂಬಾತನೇ ತನ್ನ ಪ್ರೇಯಸಿಯನ್ನು ಈಗಾಗಲೇ ವಿವಾಹಿತನಾಗಿದ್ದ ಸ್ನೇಹಿತ ರವಿಗೆ ವಿವಾಹವಾಗಲು ಒಪ್ಪಿಸಿದಾತ ಎನ್ನಲಾಗಿದೆ. ಇವರಿಬ್ಬರ ಮೇಲೆ ಕಿಡ್ನಾಪ್ ಕೇಸ್ ದಾಖಲಾಗಿದ್ದು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Related posts

ಕರ್ನಾಟಕದಲ್ಲಿ ಮತ್ತೆ ಝಿಕಾ ವೈರಸ್ ಪತ್ತೆ..! ಆರೋಗ್ಯ ಇಲಾಖೆ ಈ ಬಗ್ಗೆ ಹೇಳಿದ್ದೇನು? ಝಿಕಾ ವೈರಸ್‌ಗೆ ಚಿಕಿತ್ಸೆಯೇ ಇಲ್ಲವೇ?

ಟೆಕ್ಕಿ ಮನೆಯಲ್ಲಿ ಕೆಲಸಕ್ಕಿದ್ದ ಹದಿ ಹರೆಯದ ಯುವತಿ ಶವ ಬಾತ್ ರೂಂನಲ್ಲಿ ಪತ್ತೆ

750 ಕೋಟಿ ರೂ ತುಂಬಿದ್ದ ಟ್ರಕ್‌ ಪತ್ತೆಯಾಗಿದ್ದು ಎಲ್ಲಿ..? ತನಿಖೆಯಲ್ಲಿ ಬಯಲಾದ ರಹಸ್ಯವೇನು?