ಕ್ರೈಂಬೆಂಗಳೂರು

ಪ್ರಿಯಕರನ ಜೊತೆ ಸೇರಿ ತನ್ನ 2 ಪುಟ್ಟ ಮಕ್ಕಳನ್ನು ಕೊಂದ ತಾಯಿ..! ಸ್ಮಶಾನದ ಕಾವಲುಗಾರನಿಂದ ಕೃತ್ಯ ಬೆಳಕಿಗೆ..!

247

ನ್ಯೂಸ್ ನಾಟೌಟ್: ಪ್ರಿಯಕರನ ಜೊತೆ ಸೇರಿ ಹೆತ್ತ ಮಕ್ಕಳನ್ನೇ ಹತ್ಯೆಗೈದ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ರಾಮನಗರ ಜಿಲ್ಲೆಯ ಐಜೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ವೀಟಿ (24), ಗ್ರೆಗೋರಿ ಫ್ರಾನ್ಸಿಸ್ (27) ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಸೇರಿ ಕಬೀಲಾ (2 ವರ್ಷ), ಕಬೀಲನ್ (11 ತಿಂಗಳು) ಮಕ್ಕಳನ್ನು ಕೊಲೆಗೈದಿದ್ದರು. ಆರೋಪಿಗಳು ಮೂಲತ ಬೆಂಗಳೂರು ನಿವಾಸಿಗಳು ಎಂದು ತಿಳಿದು ಬಂದಿದೆ.

ಮದುವೆಯಾಗಿ ಎರಡು ಮಕ್ಕಳಿದ್ದರೂ ಪ್ರಿಯಕರನ ಜೊತೆ ಮಹಿಳೆ ಇತ್ತೀಚೆಗೆ ಪರಾರಿಯಾಗಿದ್ದಳು. ಬಳಿಕ ರಾಮನಗರ ಟೌನ್‍ನ ಮಂಜುನಾಥ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಿದ್ದರು.

ಇಬ್ಬರ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ತಲೆದಿಂಬಿನಿಂದ ಉಸಿರುಕಟ್ಟಿಸಿ 15 ದಿನಗಳ ಅಂತರದಲ್ಲಿ ಎರಡು ಮಕ್ಕಳನ್ನು ಹತ್ಯೆಗೈದಿದ್ದಾರೆ. ಬಳಿಕ ರಾಮನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಬಳಿಕ ಹುಷಾರಿಲ್ಲದೇ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕತೆ ಕಟ್ಟಿದ್ದರು ಎಂದು ತಿಳಿದುಬಂದಿದೆ. ಸ್ಮಶಾನದ ಕಾವಲುಗಾರನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

Click

https://newsnotout.com/2024/10/rathan-tata-benjamin-netanyahu-kannada-news/
https://newsnotout.com/2024/10/baby-the-inspector-adopted-the-baby-found-in-the-bush/
https://newsnotout.com/2024/10/sanjay-datt-in-kateel-durgaparameshwari-temple/
https://newsnotout.com/2024/10/vijayadashami-kannada-news-bjp-leader-distributed-sowrd-to-girls/
https://newsnotout.com/2024/10/9-year-old-girl-nomore-kannada-news-deva-guli/
https://newsnotout.com/2024/10/mangaluru-passport-issue-bangla-man-arrested-link-with-udupi/
https://newsnotout.com/2024/10/durga-pooje-navaratri-kannada-news-ladies-misbehaviour/
See also  ಪತ್ನಿಯ ಆತ್ಮಹತ್ಯೆ ಸುದ್ದಿ ಕೇಳಿ ಗುಂಡು ಹಾರಿಸಿಕೊಂಡ ಯೋಧ! ಏನಿದು ಕರುಣಾಜಕ ಕಥೆ..? ಅಷ್ಟಕ್ಕೂ ಅಲ್ಲಿ ನಡೆದದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget