ಕ್ರೈಂದೇಶ-ವಿದೇಶ

ನನ್ ಜೊತೆ ಇರ್ಬೇಕು, ಇಲ್ಲಾ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹುಡುಗನಿಗೆ ಮಹಿಳೆ ಬೆದರಿಕೆ..? 16 ವರ್ಷದ ಹುಡುಗನೊಂದಿಗೆ 26ರ ಯುವತಿಗೆ ಲವ್..! ಹುಡುಗನ ಮನೆಯಲ್ಲೇ ಠಿಕಾಣಿ..!

263

ನ್ಯೂಸ್ ನಾಟೌಟ್: ಮಹಿಳೆಯೊಬ್ಬಳು 16 ವರ್ಷದ ಹುಡುಗನ ಮೇಲೆ ಪ್ರೀತಿಯಾಗಿದ್ದು, ಹದಿಹರೆಯದವರನ್ನು ತನ್ನೊಂದಿಗೆ ವಾಸಿಸುವಂತೆ ಪೀಡಿಸಿದ್ದಾರೆ. ತನ್ನ ಬೇಡಿಕೆಯನ್ನು ಈಡೇರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. 26ರ ಯುವತಿ ತಾನು ಆತನೊಂದಿಗೆ ಇದ್ದು ಮದುವೆಯಾಗಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯುವತಿಯು ಸಾಮಾಜಿಕ ಮಾಧ್ಯಮದ ಮೂಲಕ ಹುಡುಗನೊಂದಿಗೆ ಮಾಡಿದ್ದಳು. ಕಡೆಗೆ ಸೀದಾ ಹುಡುಗನ ಮನೆಗೆ ಬಂದು ಅಲ್ಲಿಯೇ ಇರುವುದಾಗಿ ಹಟ ಹಿಡಿದಿದ್ದಾಳೆ ಎನ್ನಲಾಗಿದೆ. ‘ಮಹಿಳೆ ಕಳೆದ ಕೆಲವು ದಿನಗಳಿಂದ ನಮ್ಮ ಮನೆಯಲ್ಲಿಯೇ ವಾಸವಿದ್ದು, ಆಕೆಯನ್ನು ಮನೆಯಿಂದ ಹೊರ ಹೋಗುವಂತೆ ಕೇಳಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ’ ಎಂದು ಬಾಲಕನ ಕುಟುಂಬದವರು ದೂರಿದ್ದಾರೆ. ಪೊಲೀಸರು ಸಹ ‘ಸಮಸ್ಯೆಯನ್ನು ಪರಿಹರಿಸಲು ವಿಫಲವಾದಾಗ’ ಬಾಲಕನ ತಂದೆ ಸಹಾಯಕ್ಕಾಗಿ ಶಾಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನ್ನು ಸಂಪರ್ಕಿಸಿದ್ದಾರೆ ಎಂದು ವರದಿ ತಿಳಿಸಿದೆ.

‘ನನ್ನ ಮಗ ಓದಿಲ್ಲ, ಎಲ್ಲಿಯೂ ಕೆಲಸ ಮಾಡುತ್ತಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಈಗ ಆಕೆ ನಮ್ಮ ಮನೆಯಲ್ಲಿಯೇ ಇದ್ದಾಳೆ’ ಎಂದು ಹುಡುಗನ ತಂದೆ ದೂರಿದ್ದಾರೆ. ‘ನಾವು ಅವಳನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದಾಗ, ಅವಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ‘ ಎಂದು ತಿಳಿಸಿದ್ದಾರೆ. ಪೋಲೀಸರು ಮಧ್ಯ ಪ್ರವೇಶಿಸಿ ಮಹಿಳೆಯನ್ನು ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಿದಾಗ, ಆಕೆಯ ಕುಟುಂಬವು ‘ತಮಗೆ ಕೆಟ್ಟ ಹೆಸರು ತಂದಿದ್ದಾಳೆ’ ಎಂದು ಆರೋಪಿಸಿ ಆಕೆಯನ್ನು ತಮ್ಮೊಂದಿಗೆ ಉಳಿಸಿಕೊಳ್ಳಲು ನಿರಾಕರಿಸಿದ್ದರಿಂದ ಅವಳು ಮತ್ತೆ ಹುಡುಗನ ಮನೆಗೆ ಹಿಂದಿರುಗಿದ್ದಾಳೆ. ‘ಇದು ನಮಗೂ ವಿಚಿತ್ರ ಪರಿಸ್ಥಿತಿಯಾಗಿದೆ. ಮಹಿಳೆ ಅಪ್ರಾಪ್ತ ವಯಸ್ಕನೊಂದಿಗೆ ಇರಬೇಕೆಂದು ಒತ್ತಾಯಿಸುತ್ತಾಳೆ. ನಾವು ಅವಳನ್ನು ಮಹಿಳಾ ಕಲ್ಯಾಣ ವಿಭಾಗಕ್ಕೆ ಒಪ್ಪಿಸಿದ್ದೇವೆ, ಆದರೆ ಅವಳು ಅಲ್ಲಿಂದಲೂ ಹಿಂತಿರುಗಿ ಅವನ ಮನೆಗೆ ಹೋಗಿದ್ದಾಳೆ’ ಎಂದು ಸ್ಟೇಷನ್ ಹೌಸ್ ಆಫೀಸರ್ ತಿಳಿಸಿದ್ದಾರೆ.

Click 👇

https://newsnotout.com/2024/05/prajwal-revanna-passport-issue-kannada-news
https://newsnotout.com/2024/05/hindu-muslim-case-court-issue
See also  ಮಗು ಹುಟ್ಟಿದ ಕೆಲವೇ ಗಂಟೆಯೊಳಗೆ ರಸ್ತೆಯಲ್ಲಿ ಎಸೆದು ಓಡಿದ ತಾಯಿ..! ಬಸ್‌ ನಿಲ್ದಾಣದ ಬಳಿ ಅಮಾನವೀಯ ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget