ಕ್ರೈಂಬೆಂಗಳೂರುವೈರಲ್ ನ್ಯೂಸ್

ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಂದಳಾ ಸೊಸೆ? ಬಾಡಿಗೆಗೆ ಬಂದವ ಮೆನೆಯೊಡತಿ ಜೊತೆಯೇ ಲವ್ವಿ-ಡವ್ವಿ!

ನ್ಯೂಸ್ ನಾಟೌಟ್: ಪ್ರಿಯಕರನ ಜೊತೆ ಸೇರಿ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಸೊಸೆ ಸಹಿತ ಮೂವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರಶ್ಮಿಯು ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕ್ರಮೇಣ ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಸಂಪರ್ಕ ಹೊಂದಿದ್ದಳು. ಇತ್ತ ಮನೆಯ ಹಣದ ವ್ಯವಹಾರ ಸಂಬಂಧ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು.

ತಾನೇ ಮನೆ ವ್ಯವಹಾರ ನೋಡಿಕೊಳ್ಳಬೇಕು ಎಂದು ರಶ್ಮಿ ಕಾದು ಕುಳಿತಿದ್ದಳು. ಅದರಂತೆ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡುವ ಪ್ಲಾನ್ ಮಾಡಿದ್ದಳು ಎನ್ನಲಾಗಿದೆ.

ರಶ್ಮಿ, ಪುರುಷೋತ್ತಮ್, ಅಕ್ಷಯ್ ಬಂಧಿತ ಆರೋಪಿಗಳು ಎನ್ನಲಾಗಿದ್ದು. ಈ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಶ್ಮಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಅತ್ತೆ ಲಕ್ಷ್ಮಮ್ಮನನ್ನ ಕೊಂದಿದ್ದಳು ಎನ್ನಲಾಗಿದೆ.

ಅಕ್ಟೋಬರ್ 10 ರಂದು ಪ್ರಿಯಕರ ಅಕ್ಷಯ್ ಮತ್ತು ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆಯನ್ನು ಕೊಲೆ ಮಾಡಿದ್ದಳು. ನಂತರ ಹಾರ್ಟ್ ಅಟ್ಯಾಕ್ ಎಂದು ನಂಬಿಸಲು ಮುಂದಾಗಿದ್ದಳು ಎನ್ನಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related posts

ಬಂಟ್ವಾಳ ಬಿಜೆಪಿ ಶಾಸಕರಿಗೆ ಕಾರು ಡಿಕ್ಕಿ..! ರಾಜೇಶ್ ನಾಯ್ಕ್ ಆಸ್ಪತ್ರೆಗೆ ದಾಖಲು..!

35 ತುಂಡುಗಳಾಗಿ ಕತ್ತರಿಸಿದ ಪ್ರಕರಣ: ಭಯಾನಕ ವಿವರ ಬಿಚ್ಚಿಟ್ಟ 6,600 ಪುಟಗಳ ಚಾರ್ಜ್‌ಶೀಟ್ !

ನಿವೃತ್ತ ಐಎಎಸ್ ಅಧಿಕಾರಿಗೆ ಹಿಗ್ಗಾಮುಗ್ಗಾ ಥಳಿಸಿದ ಬಸ್ ಕಂಡೆಕ್ಟರ್, 10 ರೂ. ವಿಚಾರದಲ್ಲಿ ವೃದ್ದನೆಂದು ನೋಡೆದ ಥಳಿಸಿದ ಪಾಪಿ..!