ವೈರಲ್ ನ್ಯೂಸ್

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಯುವಕ-ಯುವತಿಗೆ ಜೈಲಿನಲ್ಲೇ ಚಿಗುರಿದ ಪ್ರೀತಿ, ಪೆರೋಲ್‌ನಲ್ಲಿ ಬಿಡುಗಡೆಯಾಗಿ ಮದುವೆಯಾದ ಜೋಡಿ ಹೇಳಿದ್ದೇನು?

282

ನ್ಯೂಸ್ ನಾಟೌಟ್: ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿದ್ದ ಯುವಕ-ಯುವತಿಗೆ ಜೈಲಿನಲ್ಲೇ ಪ್ರೇಮಾಂಕುರವಾಗಿ ಆ ಪ್ರೀತಿ ಮದುವೆ ಮೂಲಕ ಸುಖಾಂತ್ಯ ಕಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಅಸ್ಸಾಂ ರಾಜ್ಯದ ಅಬ್ದುಲ್ ಹಸೀಮ್ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ 8 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದರು. ಪಶ್ಚಿಮ ಬಂಗಾಳದ ಶಹನಾರಾ ಖಾತುನ್ ಕೂಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇವರಿಬ್ಬರು ಕೂಡ ಕೈದಿಗಳಾಗಿ ತಮ್ಮ ಜೀವನ ಕಳೆತಯುತ್ತಿದ್ದಾರೆ. ಆದರೆ ಇಬ್ಬರ ನಡುವೆಯೂ ಈಗ ಪ್ರೀತಿ ಪ್ರೇಮದ ಝೇಂಕಾರವಾಗಿರುವುದು ವಿಶೇಷವಾಗಿದೆ.

ಇಬ್ಬರು ಬರ್ಧಮಾನ್ ಸೆಂಟ್ರಲ್ ಕರೆಕ್ಷನಲ್ ಮಹಿಳಾ ಮತ್ತು ಪುರುಷರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಇವರು ಆಗಾಗ ಕರೆಕ್ಷನಲ್ ಹೋಮ್‌ನಲ್ಲಿ ಭೇಟಿಯಾಗುತ್ತಿದ್ದರು. ಆ ಭೇಟಿ ಪ್ರೀತಿಗೆ ತಿರುಗಿ ಇದೀಗ ಮದುವೆಯಾಗಿದ್ದಾರೆ. ಇವರು ಐದು ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾಗಿ ಮದುವೆಯಾಗಿದ್ದಾರೆ. ಎರಡು ಕುಟುಂಬದವರ ಸಮ್ಮುಖದಲ್ಲಿ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಅಬ್ದುಲ್ ಹಾಗೂ ಶಹನಾರಾ ವಿವಾಹವಾಗಿದ್ದಾರೆ. ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಅಸ್ಸಾಂನಲ್ಲಿ ನೆಲೆಸುವುದಾಗಿ ಈ ಜೋಡಿ ಹೇಳಿಕೊಂಡಿದೆ. ಇವರ ಮದುವೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

See also  ಮಹಿಳಾ ಹಾಸ್ಟೆಲ್ ​ನಲ್ಲಿದ್ದ 47 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥ..! ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರಿಗೇನಾಯ್ತು..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget