ದೇಶ-ಪ್ರಪಂಚವೈರಲ್ ನ್ಯೂಸ್

ಪ್ರಿಯಕರನ ಜೊತೆ ಓಡಿ ಹೋದ ಪತ್ನಿ: ಆತನ ಮಾಸ್ಟರ್ ಪ್ಲಾನ್ ಗೆ ನೆಟ್ಟಿಗರು ಶಾಕ್ !

ನ್ಯೂಸ್ ನಾಟೌಟ್: ಬಿಹಾರದ ಖಗರಿಯಾ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಎಂಬ ಗ್ರಾಮದಲ್ಲಿ ವಿಚಿತ್ರ ಮದುವೆ ನೆಡದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಪತ್ನಿ ಬೇರೊಬ್ಬನ ಜೊತೆ ಹೋದದಕ್ಕೆ ಹೆಂಡತಿಯ ಪ್ರೇಮಿಯ ಪತ್ನಿಯನ್ನೇ ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ.

ಅನೈತಿಕ ಸಂಬಂಧ ಅನ್ನೊದು ಇತ್ತೀಚಿಗೆ ದಾಂಪತ್ಯದಲ್ಲಿ ತುಂಬಾ ಸಾಮಾನ್ಯವಾಗಿದೆ. ಗಂಡ-ಹೆಂಡತಿ ಮಧ್ಯೆ ಅವನು, ಅವಳು ಬರೋದು, ದಾಂಪತ್ಯದಲ್ಲಿ ಹುಳಿ ಹಿಂಡೋದು ಸಾಮಾನ್ಯವಾಗಿ ಹೋಗಿದೆ. ಇಲ್ಲೊಬ್ಬನ ಜೀವನದಲ್ಲೂ ಹಾಗೆಯೇ ಆಗಿದೆ. ಹೆಂಡತಿ ಗಂಡನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಬಿದ್ದಿದ್ದಾಳೆ. ಇದನ್ನು ತಿಳಿದ ಗಂಡ ಅದಕ್ಕೆ ಬೇಸರ ಪಟ್ಕೊಂಡು ಸುಮ್ನಾಗಿಲ್ಲ. ಬದಲಿಗೆ ಹೆಂಡತಿಯೊಂದಿಗೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮನವೊಲಿಸಿ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ದಂಪತಿಗಳಿಗೆ ನಾಲ್ಕು ಮಕ್ಕಳು ಸಹ ಇದ್ದರು. ಈ ಮಧ್ಯೆ ಮಹಿಳೆ ಗಂಡನನ್ನು ಬಿಟ್ಟು ಇನ್ನೊಬ್ಬ ವ್ಯಕ್ತಿಯ ಜೊತೆ ಓಡಿಹೋಗಿದ್ದಾಳೆ. ಇನ್ನೊಂದು ವಿಚಿತ್ರವೆಂದರೆ, ವಿವಾಹವಾದ ಇಬ್ಬರೂ ಮಹಿಳೆಯರ ಹೆಸರು ಕೂಡಾ ರೂಬಿ ದೇವಿ ಎಂಬುದಾಗಿದೆ. ಈ ಮದುವೆ ಕುಟುಂಬದ ಒಪ್ಪಿಗೆಯೊಂದಿಗೆ ಆಗಿದೆ ಎನ್ನುವುದು ವಿಶೇಷ.

ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ ಎಂಬತನ ಪತ್ನಿ ಮುಖೇಶ್ ಜೊತೆ ಓಡಿಹೋಗಿರುವ ವಿಷಯ ತಿಳಿದು ತಕ್ಷಣವೇ ನೀರಜ್ ಮುಖೇಶ್ ವಿರುದ್ಧ ಅಪಹರಣ ಪ್ರಕರಣ ದಾಖಲು ಮಾಡಿದ್ದಾನೆ. ಈ ಸಮಸ್ಯೆಯನ್ನು ಪರಿಹರಿಸಲು ಗ್ರಾಮದಲ್ಲಿ ಪಂಚಾಯತಿ ಕೂಡಾ ನಡೆಸಲಾಗಿದೆ. ಆದರೆ ಮುಖೇಶ್ ಇದಕ್ಕೆ ಒಪ್ಪದ ಕಾರಣ ಓಡಿಹೋಗಿರುವ ಜೋಡಿಯ ಮೇಲೆ ಸೇಡು ತೀರಿಸಿಕೊಳ್ಳಲು ನೀರಜ್ ವಿಚಿತ್ರ ಉಪಾಯ ಹುಡುಕಿದ್ದಾನೆ. ಮುಕೇಶ್​ ಹೆಂಡತಿಯೊಂದಿಗೆ ಮದುವೆಯಾಗಲು ನಿರ್ಧರಿಸಿ ಆಕೆಯ ಮನವೊಲಿಸಿ ಮದುವೆಯಾಗಿದ್ದಾನೆ ಎಂದು ವರದಿಯಾಗಿದೆ.

Related posts

ಚಿಕನ್​ ಪ್ರಿಯರಿಗೆ ಶಾಕ್, ಆತಂಕ ಸೃಷ್ಟಿಸುತ್ತಿದೆ ಹಕ್ಕಿಜ್ವರ..! ಕೋಳಿ ಮತ್ತು ಮೊಟ್ಟೆ ತಿನ್ನದಂತೆ ಜನರಿಗೆ ಸೂಚನೆ ನೀಡಿದ್ದೆಲ್ಲಿ..?

ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ್ದೇಕೆ ಜಯಾ ಬಚ್ಚನ್..? ತಾನು ಮುಂಗೋಪಿ ಎಂದ ಸಂಸದೆ..!

ಕ್ಯಾಮರಾಗೆ ಪೋಸ್ ಕೊಡ್ತಿದ್ದ ರೂಪದರ್ಶಿ..!ಆಕೆಯ ಬಟ್ಟೆಯನ್ನೇ ಬಿಚ್ಚಿ ಕಚ್ಚಿ ಎಳೆದೊಯ್ದ ಶ್ವಾನ..!ವಿಡಿಯೋ ವೈರಲ್