Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಾವನ ಮೇಲೆಯೇ ಸೊಸೆಗೆ ಪ್ರೀತಿ..! ನಾಪತ್ತೆ ಪ್ರಕರಣ ದಾಖಲಾದ ಬಳಿಕ ಠಾಣೆಗೆ ಬಂದು ಹಾಜರಾದ ಜೋಡಿ ಹೇಳಿದ್ದೇನು..?

1.2k

ನ್ಯೂಸ್ ನಾಟೌಟ್: ಮಾವನ ಮೇಲೆ ಸೊಸೆಗೆ ಪ್ರೀತಿಯಾದ ಘಟನೆ ನಡೆದಿದೆ. ಮಾವ ಮತ್ತು ಸೊಸೆ ನಡುವಿನ ಪ್ರೀತಿಗೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದಾಗ, ಅವರು ಮನೆ ಬಿಟ್ಟು ಓಡಿಹೋಗುವ ನಿರ್ಧಾರಕ್ಕೆ ಬರುತ್ತಾರೆ. ಬಳಿಕ ಮರಳಿ ಬಂದು ಪೊಲೀಸ್ ಠಾಣೆಯಲ್ಲಿ ಹಾಜರಾಗಿ, ತಾವು ಪ್ರಾಪ್ತವಯಸ್ಕರೆಂದು ಸಾಬೀತುಪಡಿಸುವ ದಾಖಲೆಗಳನ್ನು ತೋರಿಸುತ್ತಾರೆ. ಮಧ್ಯಪ್ರದೇಶದ ದಬ್ರಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಭಿತಾರ್‌ ವಾರ್ ಠಾಣೆ ವ್ಯಾಪ್ತಿಯ ಒಬ್ಬ ಹದಿಹರೆಯದ ಬಾಲಕಿ ಮತ್ತು ಶಿವಪುರಿ ಜಿಲ್ಲೆಯ ರಾಮನಗರದ ನಿವಾಸಿ ಅವನೀಶ್ ಕುಶವಾಹ ಎಂಬಾತನ ನಡುವೆ ಕಳೆದ ಎರಡು ವರ್ಷಗಳಿಂದ ಸಂಬಂಧವಿತ್ತು. ಸಂಬಂಧದಲ್ಲಿ ಅವನೀಶ್ ಆ ಬಾಲಕಿಯ ಮಾವನಾಗಿದ್ದ, ಸಹೋದರ ಸಂಬಂಧವಾಗಿತ್ತು. ಆದರೆ ಇವೆಲ್ಲವನ್ನೂ ಕ್ಯಾರೇ ಅನ್ನದೇ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಅದೇ ರೀತಿ ಇದೇ ಮಾರ್ಚ್‌ 30ರಂದು ಯಾರಿಗೂ ಹೇಳದೇ ಓಡಿ ಹೋಗಿದ್ದಾರೆ.

ಇನ್ನು ಈ ಬಾಲಕಿಯ ಕುಟುಂಬ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಈ ಹಿನ್ನೆಲೆ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಈ ಸುದ್ದಿ ತಿಳಿದ ಬಳಿಕ ಅವನೀಶ್ ಮತ್ತು ಬಾಲಕಿ ಗುರುವಾರ(ಎ.3)ಮರಳಿ ಬಂದು ನೇರವಾಗಿ ಠಾಣೆಗೆ ಹೋಗಿದ್ದರು.

ಅಲ್ಲಿ ತಾವು ಪ್ರಾಪ್ತ ವಯಸ್ಕರೆಂದು ಸಾಬೀತುಪಡಿಸಿ, ಒಟ್ಟಿಗೆ ಜೀವಿಸಲು ಮತ್ತು ಮದುವೆಯಾಗಲು ಇಚ್ಛಿಸುವುದಾಗಿ ತಿಳಿಸಿದರು. ಬಾಲಕಿ ಠಾಣೆಗೆ ಬಂದಿದ್ದಾಳೆ ಎಂದು ತಿಳಿದ ತಕ್ಷಣ ಅವಳ ಕುಟುಂಬ ಕೂಡಾ ಅಲ್ಲಿಗೆ ಧಾವಿಸಿತು. ಎರಡೂ ಕಡೆಯ ಕುಟುಂಬಗಳನ್ನು ಸಮಜಾಯಿಸಿದ ಬಳಿಕ, ಇವರ ಹಠಕ್ಕೆ ಕೊನೆಗೆ ಕುಟುಂಬಗಳೇ ಈ ಮದುವೆಗೆ ಒಪ್ಪಿಗೆ ನೀಡಿದ್ದಾವೆ. ಅಂತಿಮವಾಗಿ ಹನುಮಾನ್ ಮಂದಿರದಲ್ಲಿ ಅವರಿಗೆ ವಿವಾಹವನ್ನು ಸಹ ನಡೆಸಲಾಗಿದೆ.

ಏರ್‌ ಪೋರ್ಟ್‌ನಲ್ಲೇ ಇಬ್ಬರು ಬ್ರಿಟನ್‌ ಸಂಸದರನ್ನು ಬಂಧಿಸಿದ ಇಸ್ರೇಲ್..! ಇಸ್ರೇಲ್-ಹಮಾಸ್ ಯುದ್ಧದ ನಡುವೆ ಬ್ರಿಟನ್‌ ಸಂಸದರ ಬಂಧನಕ್ಕೆ ಕಾರಣವೇನು..!

ತಂದೆಯಿಂದಲೇ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಕೊಲೆ ಪ್ರಕರಣ..! ಶಾದಿ ಡಾಟ್.ಕಾಮ್ ​ನಲ್ಲಿ ಸಿಕ್ಕವನಿಗೆ ಜೀವಾವಧಿ ಶಿಕ್ಷೆ

 

See also  ದೆಹಲಿ ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ದಾಳಿ..! ಕೇಜ್ರಿವಾಲ್ ಕಾರು ಇಬ್ಬರ ಮೇಲೆ ಹರಿದಿದೆ ಎಂದು ಆರೋಪ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget