ಕ್ರೈಂಬೆಂಗಳೂರುವೈರಲ್ ನ್ಯೂಸ್

ಬೆಂಗಳೂರಿನ ಮಹಿಳಾ ಟೆಕ್ಕಿಯಿಂದ ಆತ ‘ಲವ್ ಜಿಹಾದ್’ ಮಾಡಿರುವುದಾಗಿ ದೂರು! ಕಾಶ್ಮೀರಕ್ಕೆ ತೆರಳಿದ್ದೇಕೆ ಪೊಲೀಸರು?

ನ್ಯೂಸ್ ನಾಟೌಟ್: ಮಹಿಳಾ ಟೆಕ್ಕಿಯೊಬ್ಬರು ಯುವಕನೊಬ್ಬನ ವಿರುದ್ಧ ಪೊಲೀಸರಿಗೆ ಲವ್ ಜಿಹಾದ್ ಕುರಿತು ದೂರು ನೀಡಿದ್ದು, ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಲು ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಸಿಟಿಯ ಶಿಕಾರಿಪಾಳ್ಯದಲ್ಲಿ ವಾಸವಿದ್ದ ಮೊಜೀಫ್ ಅಶ್ರಫ್ ಬೇಗ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಕಾರಿಪಾಳ್ಯದಲ್ಲಿ ಯುವತಿಯನ್ನು ಭೇಟಿಯಾಗಿ ಸ್ನೇಹ ಬೆಳೆಸಿದ್ದನು. ನಂತರ ಇಬ್ಬರೂ ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿದ್ದ ಬೇಗ್ ದೈಹಿಕ ಸಂಬಂಧ ಬೆಳೆಸಿದ್ದಾನೆ. ಯಾವುದೇ ಧಾರ್ಮಿಕ ಸಂಪ್ರದಾಯಗಳಿಲ್ಲದೆ ನ್ಯಾಯಾಲಯದಲ್ಲಿಯೇ ಮದುವೆಯಾಗುವುದಾಗಿ ಭರವಸೆಯನ್ನೂ ನೀಡಿದ್ದಾನೆ.

ಆದರೆ ದೈಹಿಕವಾಗಿ ಬಳಸಿಕೊಂಡ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಇದನ್ನು ಯುವತಿ ನಿರಾಕರಿಸಿದ್ದಾರೆ. ಬೇಗ್ ಸಹೋದರ ಮೊರಿಫ್ ಅಶ್ರಫ್ ಎಂಬಾತ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯ್ದೆಯಡಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ​ವಿಶೇಷ ತನಿಖಾ ತಂಡ ಜಮ್ಮು ಕಾಶ್ಮೀರಕ್ಕೆ ತೆರಳಿದೆ ಎಂದು ವರದಿ ತಿಳಿಸಿದೆ.

Related posts

ಸಾಲ ಪಡೆದ ಮಹಿಳೆ ಹಿಂದಿರುಗಿಸಲು ವಿಫಲ! ಮರುಪಾವತಿಯ ಬದಲು 11ರ ಮಗಳನ್ನು ವಿವಾಹವಾದ ಭೂಪ!

ಮಂಗಳೂರು: ಇಂದಿರಾ ಕ್ಯಾಂಟೀನ್‌ ಬಳಿ ಬಸ್‌ ನಿರ್ವಾಹಕನ ಶವ ಪತ್ತೆ..! ಪ್ರಕರಣದ ಸುತ್ತ ಹಲವು ಅನುಮಾನ..!

ಬೆಂಗಳೂರಿನಲ್ಲಿ ವಿಚಿತ್ರ ದರೋಡೆ ದಂಧೆ, ರಾತ್ರಿ ವೇಳೆ ಒಂಟಿ ವಾಹನ ಚಾಲಕರೇ ಇವರ ಟಾರ್ಗೆಟ್! – ವಿಡಿಯೋ ನೋಡಿ