ನ್ಯೂಸ್ ನಾಟೌಟ್: ಚಾಲನೆಯಲ್ಲಿದ್ದಾಗ ಕಂಟೈನರ್ ಲಾರಿ ಡ್ರೈವರ್ ಗೆ ಹೃದಯಾಘಾತಗೊಂಡು ಸರಣಿ ಅಪಘಾತ ಸಂಭವಿಸಿದ ಪರಿಣಾಮ ತರಕಾರಿ ವ್ಯಾಪಾರಿ ಓರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿಯ ಜೇವರ್ಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.
ಮಹಮದ್ ಅಲಿ (32) ಸ್ಥಳದಲ್ಲೇ ಮೃತಪಟ್ಟಿರುವ ತರಕಾರಿ ವ್ಯಾಪಾರಿ ಎಂದು ಗುರುತಿಸಲಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಿಂದ ಕಲಬುರಗಿ ಕಡೆಗೆ ಬರ್ತಿದ್ದ ಕಂಟೈನರ್ ಲಾರಿ ಡ್ರೈವರ್ ಗೆ ಬಸ್ ನಿಲ್ದಾಣದ ಬಳಿ ಹೃದಯಾಘಾತ ಆದ ಹಿನ್ನಲೆ ಆಟೋ, ಬೈಕ್ ಗಳಿಗೆ ಢಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಲಾರಿ ನಿಂತಿದೆ ಎಂದು ತಿಳಿದುಬಂದಿದೆ.
ಹೃದಯಾಘಾತಕ್ಕೆ ಒಳಗಾದ ಲಾರಿ ಚಾಲಕನನ್ನು ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಪಿಐ, ಪಿಎಸ್ಐ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಇರುವ 3 ದ್ವಿಚಕ್ರ ವಾಹನ ಮತ್ತು 3 ಆಟೋಗಳು ಜಖಂಗೊಂಡಿದ್ದು ಓರ್ವ ಸಾವನ್ನಪ್ಪಿದ್ದಾನೆ.