ಕೊಡಗು

ಸರಣಿ ಅಪಘಾತ ನಡೆಸಿ ಚಾಲಕ ಪರಾರಿ

ನ್ಯೂಸ್ ನಾಟೌಟ್: ಮದ್ಯದ ಅಮಲಿನಲ್ಲಿದ್ದ ಟ್ರಕ್ ಚಾಲಕರೊಬ್ಬರು ಜೂ.1ರ ಬುಧವಾರ ರಾತ್ರಿ ಕಾರು, ಬೈಕ್ ಮತ್ತು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಅಪಘಾತ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಪೊಲೀಸರು ಚಾಲಕನನ್ನು ಪತ್ತೆಹಚ್ಚಿ ಬಂಧಿಸಿರುವ ಘಟನೆ ನಡೆದಿದೆ.

ಸುರತ್ಕಲ್ ಬಳಿ ಸಾರ್ವಜನಿಕರ ಸಹಾಯದಿಂದ ಕೈಲಾಶ್ ಪಾಟೀಲ್ (42) ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಲಾರಿ ಕ್ಲೀನರ್ ತಲೆಮರೆಸಿಕೊಂಡಿದ್ದಾನೆ. ಆರೋಪಿ ಚಾಲಕ ಕೈಲಾಶ್ ಪಾಟೀಲ್ ಸುರತ್ಕಲ್ ಜಂಕ್ಷನ್‌ನಲ್ಲಿ ಮೊದಲಿಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಸುರತ್ಕಲ್ ರೈಲ್ವೆ ಸೇತುವೆ ಬಳಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಜಖಂಗೊಂಡಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಹಿಂದೆ ಬೈಕಂಪಾಡಿಯಲ್ಲಿ ಕಾರು ಅಪಘಾತಕ್ಕೀಡಾದ ಘಟನೆ ಸೇರಿದಂತೆ ಸರಣಿ ರಸ್ತೆ ಅಪಘಾತದಲ್ಲಿ ಭಾಗಿಯಾಗಿದ್ದಕ್ಕಾಗಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Related posts

ಸಾಣೂರು ಕೆರೆಗೆ ಜೀವ ತುಂಬಿದ ಕಾರ್ಕಳದ ಜನಪ್ರಿಯ ನಾಯಕ

ಸಂಪಾಜೆ: ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ದಿಢೀರ್‌ ಫೇಸ್ ಬುಕ್ ಲೈವ್‌ಗೆ ಬಂದು ಪ್ರತಾಪ್‌ ಸಿಂಹ ಹೇಳಿದ್ದೇನು? ಮತದಾರರಿಗೆ ಥ್ಯಾಂಕ್ಸ್‌ ಎಂದು ಹೇಳಿದ್ಯಾಕೆ?