ಕರಾವಳಿಕಾಸರಗೋಡುವೈರಲ್ ನ್ಯೂಸ್

ಪೆಟ್ರೋಲ್‌ ಪಂಪ್‌ ಸಮೀಪದಲ್ಲೇ ಬೆಂಕಿಗಾಹುತಿಯಾದ ಲಾರಿ

408

ನ್ಯೂಸ್‌ನಾಟೌಟ್‌: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕರ್ನಾಟಕ -ಕೇರಳ ಗಡಿಭಾಗವಾದ ಕಟ್ಟತ್ತಿಲ ಸಮೀಪದ ಮೆದು ಎಂಬಲ್ಲಿ ಪೆಟ್ರೋಲ್‌ ಪಂಪ್‌ ಎದುರುಗಡೆ ನಿಲ್ಲಿಸಿದ್ದ ಲಾರಿಗೆ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

ಸೋಮವಾರ ರಾತ್ರಿ ಲಾರಿಯನ್ನು ಪೆಟ್ರೋಲ್‌ ಬಂಕ್‌ ಎದುರು ನಿಲ್ಲಿಸಲಾಗಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡು ತಕ್ಷಣ ಲಾರಿಯ ಸೈರನ್‌ ಮೊಳಗಿದ್ದು, ಚಾಲಕ ಲಾರಿಯಿಂದು ಇಳಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮತ್ತು ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿನಂದಿಸಿದ್ದಾರೆ. ಒಂದು ವೇಳೆ ಬೆಂಕಿ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಸ್ಥಳದಲ್ಲೇ ನಿಲ್ಲಿಸಿದ್ದ ಇನ್ನೊಂದು ಲಾರಿ, ಪೆಟ್ರೋಲ್‌ ಬಂಕ್‌ಗೂ ವ್ಯಾಪಿಸಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

ಕಳೆದ ಐದು ತಿಂಗಳ ಹಿಂದೆ ಈ ಲಾರಿಯನ್ನು ಖರೀದಿಸಲಾಗಿದ್ದು, ಫೆ.20ರಂದು ಶೋರೂಮ್‌ನಲ್ಲಿ ಸರ್ವೀಸ್‌ ನಡೆಸಿ ಬಂದಿರುವುದಾಗಿ ತಿಳಿದು ಬಂದಿದೆ. ಈ ಪೆಟ್ರೋಲ್‌ ಪಂಪ್‌ ಎದುರು ಖಾಲಿ ಜಾಗದಲ್ಲಿ ಹೊರ ರಾಜ್ಯಗಳಿಗೆ ಮಣ್ಣು ಸಾಗಿಸುವ ಬೃಹತ್‌ ಲಾರಿಗಳು ಪಾರ್ಕಿಂಗ್ ಮಾಡುತ್ತಿದ್ದವು.

See also  ರಾತ್ರಿ ಕಮಲಾ ಹ್ಯಾರಿಸ್ ಕಚೇರಿಯ ಮೇಲೆ ಗುಂಡಿನ ದಾಳಿ..! ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗೆ ಪ್ರಾಣ ಭಯ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget