ಕಾಸರಗೋಡುಕ್ರೈಂ

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಂಟೈನರ್‌ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು

176

ನ್ಯೂಸ್‌ ನಾಟೌಟ್‌: ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ಬಂದ್ಯೋಡಿನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಮೃತಪಟ್ಟವರನ್ನು ಬಂಬ್ರಾಣದ ಮೊಯಿದಿನ್ ಕುಂಞ (78) ಎಂದು ಗುರುತಿಸಲಾಗಿದೆ. ಝೀಬ್ರಾ ಕ್ರಾಸ್‌ನಲ್ಲಿ ರಸ್ತೆ ದಾಟಲು ನಿಂತಿದ್ದಾಗ ಅತೀ ವೇಗದಿಂದ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

See also  ಸುಳ್ಯ: ಮನೆಯವರು ಮದುವೆ ತಯಾರಿಯಲ್ಲಿರುವಾಗಲೇ ಪ್ರೀತಿಸಿದ ಹುಡುಗನ ಜೊತೆ ಹೋದಳೇ ಯುವತಿ..? ಏನಿದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ..?
  Ad Widget   Ad Widget     Ad Widget   Ad Widget   Ad Widget   Ad Widget