Uncategorized

ಶಿವ, ಪಾರ್ವತಿ ಧೂಮಪಾನ ಫೋಟೊ ಶೇರ್ ಮಾಡಿದ ಲೀನಾ

ನ್ಯೂಸ್ ನಾಟೌಟ್: ಕಾಳಿ ಸಾಕ್ಷ್ಯಚಿತ್ರದ ವಿವಾದಿತ ಪೋಸ್ಟರ್ ಬಳಿಕ ನಟಿ, ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಫೋಟೊ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ. 

ಶಿವ, ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೊವನ್ನು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್ ಕೂಡ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ಹೊಂದಿದೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ನೀನು ದ್ವೇಷವನ್ನು ಹರಡುತ್ತಿದ್ದು, ಧರ್ಮವನ್ನು ಅವಮಾನಿಸುವ ಕೆಲಸ ಮಾಡುವುತ್ತಿದ್ದಿಯಾ, ಇದನ್ನು ನಿಲ್ಲಿಸಬೇಕು ಎಂದು ನೂರಾರು ಜನರು ಲೀನಾ ಗೆ ಜಾಲತಾಣದಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ. 

ಈ ಹಿಂದೆ ಲೀನಾ ‘ಕಾಳಿ‘ ಎಂಬ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್ ಹಂಚಿಕೊಂಡಿದ್ದರು. ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಕೈಯಲ್ಲಿ ಎಲ್ ಜಿಬಿಟಿಕ್ಯೂ ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಿದ್ದರು. ಈ ಪೋಸ್ಟರ್ ಹಾಗೂ ಲೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Related posts

ಶಾಲೆಯಿಂದ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವಿವಾಹಿತ ಶಿಕ್ಷಕಿ,ದೇವಾಲಯದ ಬೆಟ್ಟದ ಬುಡದಲ್ಲೇ ಪತ್ತೆಯಾಯ್ತು ನಿಲ್ಲಿಸಿದ ಸ್ಕೂಟಿ, ಹೂತಿಟ್ಟ ಶವ..!ಏನಿದು ಘಟನೆ?

80 ವರ್ಷದ ಬಳಿಕ ಪರಸ್ಪರ ಸ್ನೇಹಿತೆಯರ ಭೇಟಿ, ಇಳಿವಯಸ್ಸಿನಲ್ಲೂ ಸುಧೆಯಾಗಿ ಹರಿದ ಸ್ನೇಹದ ಹೊನಲು

ಕಾಡಾನೆ ಸೆರೆಯಾದ ನಂತರ ಸ್ಥಳದಲ್ಲಿ ವಾಗ್ವಾದ,ಅಧಿಕಾರಿಗಳಿಗೆ ಹಲ್ಲೆ: ಓರ್ವ ವಶಕ್ಕೆ