Latestಕ್ರೈಂವಿಡಿಯೋವೈರಲ್ ನ್ಯೂಸ್

ಲಾಂಗ್‌ ಹಿಡಿದು ರೀಲ್ಸ್ ಮಾಡಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು..! ರಜತ್‌, ವಿನಯ್‌ ವಿರುದ್ಧ ದೂರು ದಾಖಲು..!

654

ನ್ಯೂಸ್‌ ನಾಟೌಟ್: ಕನ್ನಡ ಬಿಗ್‌ ಬಾಸ್‌ ಖ್ಯಾತಿಯ ರಜತ್‌ ಕಿಶನ್‌ ಮತ್ತು ವಿನಯ್‌ ಗೆ ರೀಲ್ಸ್ ನಿಂದ ಸಂಕಷ್ಟ ಎದುರಾಗಿದ್ದು, ಎಫ್‌ ಐರ್‌ ದಾಖಲಾಗಿದೆ.

ವಿನಯ್‌, ರಜತ್‌ ಇಬ್ಬರು ಗೆಳೆಯರಾಗಿದ್ದು, ಇತ್ತೀಚೆಗೆ ಇಬ್ಬರು ಜತೆಯಾಗಿಕೊಂಡು ರೀಲ್ಸ್‌ ಮಾಡಿದ್ದರು. ಆದರೆ ರೀಲ್ಸ್‌ ಮಾಡುವಾಗ ಲಾಂಗ್‌ ಹಿಡಿದುಕೊಂಡು ರೀಲ್ಸ್‌ ಮಾಡಿದ್ದು, ಇಬ್ಬರಿಗೂ ಸಂಕಷ್ಟ ಎದುರಾಗಿದೆ.

ಲಾಂಗ್ ಹಿಡಿದು ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ಅನ್ನು ದಾಖಲು ಮಾಡಿಕೊಳ್ಳಲಾಗಿದೆ.

ವಿನಯ್‌, ರಜತ್‌ ನಕಲಿ ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ್ದಾರೆ. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಲಾಂಗ್‌, ಮಚ್ಚು, ಗನ್‌ ಅಸಲಿ ಇರಲಿ ಅಥವಾ ನಕಲಿ ಇರಲಿ ಇಂತಹ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರೀಲ್ಸ್‌ ಮಾಡುವಂತಿಲ್ಲ.

ಇದನ್ನೂ ಓದಿ:ಪ್ರವಾಸಕ್ಕೆ ಕರೆದೊಯ್ದು 11 ವರ್ಷದ ಮಗನ ಕತ್ತು ಸೀಳಿದ ತಾಯಿ..! ಮಗನನ್ನು ಕೊಂದ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿದ ಮಹಿಳೆ..!

See also  ಪುತ್ತೂರು: ಜಗದಗಲ ಇಂಡಸ್ಟ್ರಿ ಮಡ್ ಬ್ರಿಕ್ಸ್ ಘಟಕ ಶುಭಾರಂಭ, ಗುಣಮಟ್ಟದ ಬ್ರಿಕ್ಸ್ ಗಳಿಗಾಗಿ ಈ ಕೂಡಲೇ ಸಂಪರ್ಕಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget