ನ್ಯೂಸ್ ನಾಟೌಟ್: ಸಿಲಿಕಾನ್ ಸಿಟಿಯ ಕೆ.ಆರ್ ಪುರಂ ಮಾರ್ಕೆಟ್ ನಲ್ಲಿಂದು(ಎ.18) ಪುಡಿರೌಡಿ ಲಾಂಗ್ ನಿಂದ ಸಿಕ್ಕ ಸಿಕ್ಕ ಕಾರ್ ಗಳ ಗ್ಲಾಸ್ ಹೊಡೆದು ಹಾಕಿ ಹಾನಿ ಮಾಡಿದ್ದಾನೆ.
ಬೆಳಗ್ಗಿನ ಜಾವ ಕಾರು, ಗೂಡ್ಸ್ ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿದ್ದು, ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. ಗಾಂಜಾ ನಶೆಯಲ್ಲಿ ಲಾಂಗ್ ಹಿಡಿದು ವ್ಯಾಪಾರಿಗಳಿಗೆ, ಜನರಿಗೆ ಬೆದರಿಕೆ ಹಾಕಿ ವಾಹನಗಳಿಗೆ ಹಾನಿ ಮಾಡಿದ್ದಾನೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಪುಡಿರೌಡಿಯನ್ನ ಹಿಡಿದು ಕೆ.ಆರ್ ಪುರಂ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ.
ಭಟ್ಕಳ: ಗರ್ಭಿಣಿ ಗೋವನ್ನು ಕಡಿದು ಮಾಂಸ ಮಾಡಿ ಕುಕೃತ್ಯ..! ಹೊಟ್ಟೆಯೊಳಗಿದ್ದ ಕರುವನ್ನು ನದಿ ಬದಿ ಎಸೆದು ಪರಾರಿ..!