ಕರಾವಳಿಕ್ರೈಂವೈರಲ್ ನ್ಯೂಸ್

ಭ್ರಷ್ಟ ತಹಶೀಲ್ದಾರ್ ಅಜಿತ್‌ ರೈ ಲಕ್ಸುರಿ ಬದುಕಿನ ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳು! ಕೇವಲ ಮಕ್ಕಳ ಆಟದ ಸಾಮಾನುಗಳಿಗೇ ಲಕ್ಷ ಲಕ್ಷ ಬೆಲೆ! ಪುತ್ತೂರಿನ ಕುಬೇರನ ಸಾಮ್ರಾಜ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ

ಕೆ.ಆರ್‌. ಪುರದ ತಹಸೀಲ್ದಾರ್‌ ಆಗಿದ್ದು ಬೇಕಾಬಿಟ್ಟಿ ಭ್ರಷ್ಟಾಚಾರ (Corruption Case) ಮತ್ತು ಖತರ್ನಾಕ್‌ ಐಡಿಯಾಗಳ ಮೂಲಕ ಸಾವಿರಾರು ಕೋಟಿ ರೂ. ಒಡೆಯನಾದ ಅಜಿತ್‌ ರೈ (Ajit Rai) ಮಾಡಿಕೊಂಡಿರುವ ಮನೆ, ಆಸ್ತಿ, ಹಣದ ಮೌಲ್ಯ ಒಂದು ಕಡೆಯಾದರೆ, ಆ ಕುಬೇರನ ಮನೆಯೊಳಗಿರುವ ವಸ್ತುಗಳದೇ ಕೋಟಿ ಬೆಲೆ ಬಾಳುತ್ತವೆ.
ನಾಲ್ಕು ದಿನಗಳ ಹಿಂದೆ ಲೋಕಾಯುಕ್ತ ಪೊಲೀಸರು (Lokayukta Raid) ರಾಜ್ಯದ 14 ಜಿಲ್ಲೆಗಳಲ್ಲಿ ದಾಳಿ ನಡೆಸಿ 15 ಜನ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದರು. ಹೀಗೆ ಬಲೆಗೆ ಬಿದ್ದ 15 ಜನರಲ್ಲಿ ಅಜಿತ್‌ ರೈ ಒಬ್ಬನೇ ಆ ೧೪ ಜನರನ್ನೂ ಮೀರಿಸುವ ಸಂಪತ್ತು ಹೊಂದಿದ್ದಾರೆ.

ಪುತ್ತೂರಿನಲ್ಲಿ ಸರ್ವೇಯರ್‌ ಆಗಿದ್ದ ಅಪ್ಪ ಆನಂದ್‌ ರೈ ಅವರು ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಾಗ ಅನುಕಂಪದ ಭಿಕ್ಷೆಯಾಗಿ ಸಿಕ್ಕಿದ ಸರ್ಕಾರಿ ಉದ್ಯೋಗವನ್ನು ತನ್ನ ಐಷಾರಾಮಿ ಮತ್ತು ಶೋಕಿ ಹಾಗೂ ಕನಸಿನ ಬದುಕಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ಬಳಸಿಕೊಂಡ ಅಜಿತ್‌ ರೈಯ ಬಣ್ಣ ಬಣ್ಣದ ಬದುಕಿನ ಕಥೆ ವಿಚಿತ್ರವಾಗಿದೆ.
ಆತನಿಗೆ ಸೇರಿದ 11 ಮನೆಗಳಿಗೆ ಪೊಲೀಸರು ದಾಳಿ ಮಾಡಿದ್ದರು. ಅದರಲ್ಲಿ ಗೆಳೆಯರು, ಸೋದರರು, ಆಪ್ತರ ಹೆಸರಿನಲ್ಲಿದ್ದ ಮನೆಗಳೇ ಹೆಚ್ಚು. ಸುಮಾರು 11 ಹೈ ಎಂಡ್‌ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಇನ್ನು ಕೆಲವು ಇನ್ನೂ ಸಿಕ್ಕಿಲ್ಲ. ದೇವನಹಳ್ಳಿ, ದೊಡ್ಡಬಳ್ಳಾಪುರ, ಜಿಕ್ಕಬಳ್ಳಾಪುರ ಭಾಗವೊಂದರಲ್ಲೇ 150 ಎಕರೆ ಜಾಗ ಖರೀದಿ ಮಾಡಿದ್ದು, ಅದೆಷ್ಟೋ ಎಕರೆ ಭೂಮಿಯನ್ನು ಗೆಳೆಯರ ರಿಯಲ್‌ ಎಸ್ಟೇಟ್‌ಗೆ ಒದಗಿಸಿದ್ದು.

1. ಅಜಿತ್ ರೈ ಮನೆಯ ಹಾಲ್‌ನಲ್ಲೇ ಬರೋಬ್ಬರಿ 4.53 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಕಂಡುಬಂದಿವೆ. ಸ್ಮಾರ್ಟ್ ಟಿವಿ, ಹೋಂ ಥಿಯೇಟರ್, ಸೋಫಾ ಸೆಟ್‌ನ ಮೌಲ್ಯವೇ 4.53 ಲಕ್ಷ ರೂ.ಗಳು.

2.ಮಕ್ಕಳ ಸ್ಟಡಿ ರೂಂನಲ್ಲಿ 3.81 ಲಕ್ಷ ಮೌಲ್ಯದ ವಸ್ತುಗಳು! ಅಜಿತ್‌ ರೈಗೆ ಇಬ್ಬರು ಮಕ್ಕಳಿದ್ದಾರೆ. ಅವರ ಬೆಡ್ ರೂಂನಲ್ಲಿ 1.26 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ ಬರೆ, ಬ್ಯಾಗ್ ಗಳು ಪತ್ತೆಯಾಗಿವೆ.

3.ಜಿಮ್ ಎಕ್ವಿಪ್ಮೆಂಟ್ಸ್, ಲ್ಯಾಪ್ ಟಾಪ್, ಯೋಗ ಮ್ಯಾಟ್ ಸೇರಿ ಸುಮಾರು 35 ತರದ ವಸ್ತುಗಳು ಸಿಕ್ಕಿವೆ. ಇದರ ಮೌಲ್ಯ ಅಂದಾಜು ಮಾಡಬೇಕಷ್ಟೆ.

4.ಅಮಾನತುಗೊಂಡ ತಹಸೀಲ್ದಾರ್ ಬೆಡ್ ರೂಂನಲ್ಲಿ 4.28 ಲಕ್ಷ ಮೌಲ್ಯದ ವಸ್ತುಗಳು ಪತ್ತೆ. ಇದರಲ್ಲಿ ಎಸಿ, ಟಿವಿ, ಬಟ್ಟೆ ಬರೆ ಬ್ಯಾಗ್‌ ಸೇರಿವೆ. ಉಳಿದ ಬಟ್ಟೆ ಬರೆಗಳ ಮೌಲ್ಯ ಇದರಲ್ಲಿ ದಾಖಲಾಗಿಲ್ಲ.

5.ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆಯಲ್ಲಿ 5.83 ಲಕ್ಷ ಮೌಲ್ಯದ ವಸ್ತುಗಳು ಸಿಕ್ಕಿವೆ. ಹಾಗೂ 50 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆ.

6.ಬೇಕಾಬಿಟ್ಟಿ ಆಸ್ತಿ ಮಾಡಿರುವ ಅಜಿತ್‌ ರೈ ಒಟ್ಟಾರೆ ಆಸ್ತಿ ನೋಡಿದರೆ ಚಿನ್ನಾಭರಣಗಳ ಪಾಲು ಸ್ವಲ್ಪ ಕಡಿಮೆ ಎಂದೇ ಹೇಳಬಹುದು! ಅಜಿತ್ ರೈ ಮನೆಯಲ್ಲಿ ಸಿಕ್ಕಿದ್ದು 795 ಗ್ರಾಂ ಚಿನ್ನಾಭರಣ ಮಾತ್ರ! 100 ಗ್ರಾಂ ತೂಕದ ಒಂದು ಕಡಗ, 183 ಗ್ರಾಂ ತೂಕದ ಚೈನ್, 108 ಗ್ರಾಂ ಲಾಂಗ್ ಚೈನ್, ಮುತ್ತಿನ ಹಾರ, ಉಂಗುರ, ಬ್ರಾಸ್ ಲೇಟ್ ಸೇರಿ 795 ಗ್ರಾಂ ಚಿನ್ನಾಭರಣ ಪತ್ತೆ‌ಯಾಗಿದೆ. ಅದೇ ರೀತಿ 7ಕೆಜಿ 520 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿವೆ.

7.ಬೆಳ್ಳಿ ಲೋಟ, ದೀಪ, ತಟ್ಟೆ, ದೊಡ್ಡ ದೀಪಗಳು, ಬೆಳ್ಳಿ ಚಮಚ ಸೇರಿ ಮೂರು ಲಕ್ಷ ಮೌಲ್ಯದ ಹಲವು ವಸ್ತುಗಳು ದೊರೆತಿವೆ.

8. ಅಜಿತ್ ರೈ ಮನೆಯಲ್ಲಿ 7.63 ಲಕ್ಷ ಮೌಲ್ಯದ ವಾಚ್ ಗಳು ಪತ್ತೆಯಾಗಿವೆ. ಮೂರು ರೇಡೋ, ಮೆಸಾರಿಟಿ, ಟೈಟಾನ್, ಟೆಸ್ಲಾಟ್, ಸಿಕೋ ಕಂಪನಿಯ ದುಬಾರಿ ಬೆಲೆಯ 27 ವಾಚ್ ಗಳು ಪತ್ತೆಯಾಗಿವೆ.

9.ಅಜಿತ್ ರೈ ಮನೆಯಲ್ಲಿ ಒಟ್ಟು 16 ಮೊಬೈಲ್ ಫೋನ್ ಪತ್ತೆಯಾಗಿವೆ. ಇವುಗಳ ಪೈಕಿ 7 ಬಳಕೆಯಲ್ಲಿ ಇರಲಿಲ್ಲ. ಬಳಕೆಯಲ್ಲಿರುವ ಒಂಬತ್ತು ಫೋನ್‌ಗಳ ಮೌಲ್ಯ 7 ಲಕ್ಷ ರೂ.

ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ವಸ್ತುಗಳ ಪಂಚನಾಮೆ ಮಾಡಿ ಮಹಜರು ಮಾಡಿದ್ದಾರೆ. ಕೆಲವು ಅಗತ್ಯ ವಸ್ತುಗಳನ್ನ ವಶಕ್ಕೆ ಪಡೆದು ಉಳಿದವುಗಳನ್ನು ವಾಪಸ್ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

ಮಂಗಳೂರು ಆಕಾಶವಾಣಿಯಲ್ಲಿ ಡಾ.ಅನುರಾಧಾ ಕುರುಂಜಿಯವರ ಭಾಷಣ ಪ್ರಸಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಸುವೋಟೊ ಕೇಸ್..! ಅಷ್ಟಕ್ಕೂ ಸಂಸದ ಹೇಳಿದ್ದೇನು..?

ಪುತ್ತೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತನ ಮೇಲೆ ದಾಳಿ, ಡಸ್ಟರ್ ಕಾರಿನಲ್ಲಿ ಬಂದು ತಂಡದಿಂದ ಕೃತ್ಯ