ಕ್ರೈಂರಾಜಕೀಯವೈರಲ್ ನ್ಯೂಸ್

ಲೋಕಾಯುಕ್ತದ ಮುಂದೆ ವಿಚಾರಣೆಗೆ ಹಾಜರಾದ ಸಚಿವ ಜಮೀರ್ ಅಹ್ಮದ್ ಖಾನ್..! ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಬಗ್ಗೆ ನೊಟೀಸ್ ನೀಡಿದ್ದ ಲೋಕಾಯುಕ್ತ

80
Spread the love

ನ್ಯೂಸ್ ನಾಟೌಟ್: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಮಂಗಳವಾರ(ಡಿ.3) ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ಬೆಳಗ್ಗೆ ದಾಖಲೆ ಸಮೇತ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಚಿವ, ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ಎನ್ನಲಾಗಿದೆ.

ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಲೋಕಾಯುಕ್ತ ಕರೆ ನೀಡಿತ್ತು. ಈ ಹಿಂದೆ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ್ದ ಎಸಿಬಿ, ಜಮೀರ್ ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿ, ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿತ್ತು. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು.
ನಂತರ ಸರ್ಕಾರ ಎಸಿಬಿ ರದ್ದು ಮಾಡಿ ಆದೇಶ ನೀಡಿದ್ದರಿಂದ, ಆ ಪ್ರಕರಣವನ್ನ ಈಗ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಅದರಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಜಮೀರ್ ಗೆ ಲೋಕಾಯುಕ್ತ ನೊಟೀಸ್ ನೀಡಿದ್ದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

Click

https://newsnotout.com/2024/12/mangaluru-udupi-pengal-cyclon-road-hd/
https://newsnotout.com/2024/12/mangaluru-real-stra-uppendra-temple-run-ui-cinema-d/
https://newsnotout.com/2024/12/tamilnadu-cyclon-forest-minister-visit-viral-news-d/
https://newsnotout.com/2024/12/kaadaba-man-suspence-case-revealed-viral-news-police/
https://newsnotout.com/2024/12/karimani-kannada-news-atm-theft-viral-news-krishna/
See also  ಪ್ರೇಮಿ​ ಜೊತೆ ಗಂಡನೇ ಪತ್ನಿಯ ವಿವಾಹ ಮಾಡಿಸಿಕೊಟ್ಟ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​..! ಮತ್ತೆ ಮೊದಲ ಗಂಡನ ಬಳಿ ಸೇರಿದ ಪತ್ನಿ..!
  Ad Widget   Ad Widget   Ad Widget   Ad Widget   Ad Widget   Ad Widget