Latestಕ್ರೈಂದೇಶ-ವಿದೇಶ

ಲೋಕಾಯುಕ್ತ DYSP ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ​ಮೇಲ್..!ವಜಾಗೊಂಡಿದ್ದ​ ಪೊಲೀಸ್ ಕಾನ್ಸ್ ​ಟೇಬಲ್ ಅರೆಸ್ಟ್..!

519
Pc Cr: Tv 9 kannada
Spread the love

ನ್ಯೂಸ್ ನಾಟೌಟ್: ಲೋಕಾಯುಕ್ತ ಡಿವೈಎಸ್ ​ಪಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಜಾಗೊಂಡ ರಿಸರ್ವ್ ಪೊಲೀಸ್ ಕಾನ್ಸ್ ​ಟೇಬಲ್ ಮುರುಗಪ್ಪ ಬಂಧಿತ ಆರೋಪಿ ಎಂದು ವರದಿ ತಿಳಿಸಿದೆ. ಮುರುಗೆಪ್ಪ ವಿರುದ್ಧ ರಾಜ್ಯದ ವಿವಿಧ ಠಾಣೆಯಲ್ಲಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ಆರೋಪಿ ಮುರುಗಪ್ಪ ಲೋಕಾಯುಕ್ತ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್​ಮೇಲ್​ ಮಾಡಿ ಹಣ ಸುಲಿಗೆ ಮಾಡುತ್ತಿದ್ದನು ಎನ್ನಲಾಗಿದೆ. ಲೋಕಾಯುಕ್ತ ಡಿವೈಎಸ್ ​ಪಿ ಬಸವರಾಜು ಆರ್. ಮಗದಮ್ ನೀಡಿದ ದೂರಿನ ಆಧಾರದ ಮೇಲೆ ವಿಧಾನಸೌಧ ಠಾಣೆಯಲ್ಲಿ ಎಫ್ ​ಐ ಆರ್ ದಾಖಲಾಗಿತ್ತು.

ಇದನ್ನೂ ಓದಿ:ರೇಸಿಂಗ್‌ ವೇಳೆ ಮತ್ತೆ ಅಪಘಾತಕ್ಕೀಡಾದ ಸ್ಟಾರ್ ನಟನ ಕಾರು..! ಇಲ್ಲಿದೆ ವಿಡಿಯೋ

ಆರೋಪಿ ಮುರುಗಪ್ಪ ಅಪರಿಚಿತ ನಂಬರ್ ​ನಿಂದ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ಲೋಕಾಯುಕ್ತ ಡಿವೈಎಸ್ ​ಪಿ ಅಂತ ಪರಿಚಯ ಮಾಡಿಕೊಳ್ಳುತ್ತಿದ್ದನು. ನಿಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್ ಹಾಕಲಾಗುತ್ತಿದೆ ಅಂತ ಬೆದರಿಕೆ ಹಾಕುತ್ತಿದ್ದನು. ನಿಮ್ಮ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದರೇ ಹಣ ನೀಡಿ ಅಂತ ಡಿಮ್ಯಾಂಡ್ ಮಾಡುತ್ತಿದ್ದನು. ಇದೇ ರೀತಿ ಮುರುಗಪ್ಪ ಹಲವು ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ‌ ಹಣ ವಸೂಲಿ ಮಾಡಿದ್ದನು ಎನ್ನಲಾಗಿದೆ. ಇನ್ನು, ಬ್ಲ್ಯಾಕ್ ​ಮೇಲ್ ಆರೋಪದ ಮೇಲೆ ಮುರುಗಪ್ಪ ಹಲವು ಬಾರಿ ಜೈಲು ಸೇರಿದ್ದನು. ಬಿಡುಗಡೆಯಾದ ಬಳಿಕ ಮತ್ತೆ ಬೇರೆ ಕಡೆ ಲೋಕಾಯುಕ್ತ ಹೆಸರಿನಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದನು ಎನ್ನಲಾಗಿದೆ.

See also  ಮಂಗಳೂರು:'ಡ್ರಗ್ ಅಡಿಕ್ಟ್ ಯುವತಿಯ ಗೂಂಡಾ ವರ್ತನೆ' ಎಂಬ ವಿಡಿಯೋ ವೈರಲ್! ಆಕೆ ಡ್ರಗ್ ಅಡಿಕ್ಟ್ ಅಲ್ಲ ಎನ್ನುತ್ತಿರುವುದೇಕೆ ಪೊಲೀಸರು? ಅಷ್ಟಕ್ಕೂ ಅಂದು ಅಲ್ಲಿ ನಡೆದದ್ದೇನು?
  Ad Widget   Ad Widget   Ad Widget   Ad Widget