ಕಾಸರಗೋಡುಕ್ರೈಂ

ಶರ್ಟ್‌ ಒಳಗೆ ಕಂತೆ ಕಂತೆ ನೋಟು..! ಆ ವ್ಯಕ್ತಿ ಸಿಕ್ಕಿ ಬಿದ್ದದ್ದೇಗೆ..?

218

ನ್ಯೂಸ್ ನಾಟೌಟ್: ಶರ್ಟ್‌ ಒಳಗೆ 14 ಲಕ್ಷ ರೂ. ನಗದನ್ನು ಇಟ್ಟುಕೊಂಡು ಸಾಗುತ್ತಿದ್ದ ವ್ಯಕ್ತಿಯೊಬ್ಬ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿನೋ ಎಂಬ ವ್ಯಕ್ತಿ ಕೇರಳ-ತಮಿಳುನಾಡು ಗಡಿಯಲ್ಲಿರುವ ವಾಳಯಾರ್ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಚೆಕ್‌ ಪೋಸ್ಟ್‌ ನಲ್ಲಿ ವಾಹನಗಳ ತಪಾಸಣೆಯನ್ನು ನಡೆಸಿದ್ದಾರೆ. ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿನೋ ಪೊಲೀಸರು ಪರಿಶೀಲನೆ ನಡೆಸಿದಾಗ ಅನುಮಾನಸ್ಪಾದವಾಗಿ ವರ್ತಿಸಿದ್ದಾನೆ.

ಪೊಲೀಸರಿಗೆ ವಿನೋ ಹಾಕಿಕೊಂಡ ಬಟ್ಟೆಯ ಮೇಲೆ ಅನುಮಾನ ಮೂಡಿದೆ. ಈ ಕಾರಣದಿಂದ ಆತನನ್ನು ಕೆಳಗಿಳಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಬಟ್ಟೆಯೊಳಗೆ ಬಚ್ಚಿಟ್ಟಿರುವ ನೋಟುಗಳನ್ನು ಹೊರ ಹಾಕಿದ್ದಾರೆ. ಒಂದೊಂದು ನೋಟಿನ ಕಂತುಗಳನ್ನು ಹೊರಗೆ ಹಾಕಿ, ಒಟ್ಟು 14 ಲಕ್ಷ ರೂಪಾಯಿಯ ನಗದನ್ನು ಬಟ್ಟೆಯಿಂದ ಹೊರಗೆ ತೆಗೆದಿದ್ದಾನೆ. ಚುನಾವಣಾ ನೀತಿ ಸಂಹಿತೆಯ ಪ್ರಕಾರ, ಒಬ್ಬ ವ್ಯಕ್ತಿಗೆ ಕೇವಲ 50,000 ರೂ.ಗಳನ್ನು ಸಾಗಿಸಲು ಅನುಮತಿಸಲಾಗಿದೆ. ಅನುಮತಿಸಲಾದ ಮೊತ್ತಕ್ಕಿಂತ ಹೆಚ್ಚಿನ ಯಾವುದೇ ಮುಖಬೆಲೆಯನ್ನು ಸಾಗಿಸಲು ಅಗತ್ಯ ದಾಖಲೆಗಳ ಅಗತ್ಯವಿದೆ. ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆದಾಯ ತೆರಿಗೆ ಇಲಾಖೆಗೆ ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಕೇರಳದಲ್ಲಿ ಲೋಕಸಭಾ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ. ಮತದಾನಕ್ಕೂ ಮುನ್ನ ಕೇರಳ-ತಮಿಳುನಾಡು ಗಡಿಯಲ್ಲಿ ಅಧಿಕಾರಿಗಳು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

See also  "ನಮ್ಮ ಶಾಲೆ ಮಕ್ಕಳಿಗೆ ಹೆಬ್ಬುಲಿ ಹೇರ್ ಕಟ್ ಮಾಡ್ಬೇಡಿ" ಸಲೂನ್ ಮಾಲೀಕನಿಗೆ ಹೆಡ್‌ ಮಾಸ್ಟರ್ ಪತ್ರ..! ಹೆಡ್ ಮಾಸ್ಟರ್ ಬರೆದ ಈ ವೈರಲ್ ಪತ್ರದಲ್ಲಿ ಮತ್ತೇನೇನಿದೆ?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget