ಕರಾವಳಿಕೊಡಗು

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್​​ ಒಡೆಯರ್​ ಬಳಿ ಇರೋ ಆಸ್ತಿ ಎಷ್ಟು?ಇವರ ಬಳಿ ಸ್ವಂತ ಕಾರೂ ಇಲ್ಲ ಗೊತ್ತಾ?!!

151

ನ್ಯೂಸ್‌ ನಾಟೌಟ್‌ : ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್​​​​ ಒಡೆಯರ್​ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಕೇವಲ 5 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿ ಮೈಸೂರಿನ ಒಡೆಯ ಯದುವೀರ್‌ ಅಚ್ಚರಿ ಮೂಡಿಸಿದ್ದಾರೆ.ಯಾವುದೇ ಕೃಷಿ ಭೂಮಿಯಾಗಲಿ, ಸೈಟ್‌ ಆಗಲಿ, ಮನೆ ಆಗಲಿ ಇಲ್ಲ ಎಂಬುದು ವಿಶೇಷವೆಂಬಂತಿದೆ.

ಇನ್ನು, ಯದುವೀರ್‌ ಅವರ ಹೆಸರಿನಲ್ಲಿ ಬೈಕ್‌, ಕಾರು ಸೇರಿ ಯಾವುದೇ ವಾಹನವಿಲ್ಲ.ಕೈಯಲ್ಲಿ 1 ಲಕ್ಷ ರೂ. ನಗದು ಇದೆ. ವಿವಿಧ ಬ್ಯಾಂಕ್‌ ಅಕೌಂಟ್‌ಗಳಲ್ಲಿ 1.36 ಕೋಟಿ ರೂ. ಇದೆ. ಜತೆಗೆ 3.25 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿ ಕೂಡ ಇದೆ.ಒಟ್ಟು 4.99 ಕೋಟಿ ರೂ.ಚರಾಸ್ತಿ ಹೊಂದಿರುವುದಾಗಿ ಯದುವೀರ್‌ ಘೋಷಿಸಿಕೊಂಡಿದ್ದಾರೆ.

ಇನ್ನು, ಯದುವೀರ್​​ ಪತ್ನಿ ಬಳಿ 75 ಸಾವಿರ ರೂ. ನಗದು, 90 ಲಕ್ಷ ಮೌಲ್ಯದ 2 ಕೆಜಿ ಚಿನ್ನ, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ, 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಇದೆ. ಒಟ್ಟು 1.04 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.ಯದುವೀರ್‌ ಪುತ್ರನ ಕೈಯಲ್ಲಿ 5 ಸಾವಿರ ರೂ. ನಗದು ಇದ್ದು, ಮ್ಯೂಚುವಲ್‌ ಫಂಡ್‌ನಲ್ಲಿ 1.49 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಟಾಟಾ ಲೈಫ್‌ ಇನ್ಸೂರೆನ್ಸ್‌ನಲ್ಲಿ 1.89 ಕೋಟಿ ರೂ. ಹೂಡಿಕೆ ಮಾಡಿದ್ದು, 12 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಇದೆ. ಇವರ ಹೆಸರಲ್ಲಿ ಒಟ್ಟು 3.63 ಕೋಟಿ ರೂ. ಚರಾಸ್ತಿ ಇದೆ ಎಂದು ಹೇಳಲಾಗಿದೆ.

See also  ಕಾಡಾನೆಗಳಿಗೆ ಹೆದರಿ ಸ್ನಾನ ಬಿಟ್ಟು ಚಡ್ಡಿಯಲ್ಲೇ ಓಡಿದ ಯುವಕರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget