Latestಕ್ರೈಂವಿಡಿಯೋವೈರಲ್ ನ್ಯೂಸ್

ಮೂತ್ರ ವಿಸರ್ಜಿಸಲು ಮಾರ್ಗ ಮಧ್ಯೆ ಟ್ರೈನ್ ನಿಲ್ಲಿಸಿದರಾ ಲೋಕೋ ಪೈಲಟ್‌..! ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜನೆಯ ವಿಡಿಯೋ ವೈರಲ್‌..!

509

ನ್ಯೂಸ್‌ ನಾಟೌಟ್ : ತುರ್ತು ಸಂದರ್ಭಗಳಲ್ಲಿ ಮಾತ್ರ ಚಲಿಸುತ್ತಿರುವ ರೈಲನ್ನು ಮಧ್ಯದಲ್ಲಿ ನಿಲ್ಲಿಸಲಾಗುತ್ತದೆ. ಆದರೆ ಮೂತ್ರ ವಿಸರ್ಜಿಸುವ ಸಲುವಾಗಿ ಲೋಕೋ ಪೈಲಟ್‌ ಒಬ್ಬರು ರೈಲು ನಿಲ್ಲಿಸಿದ ಘಟನೆ ನಡೆದಿದೆ.

ಹೌದು ಲೋಕೋ ಪೈಲಟ್‌ ಅರ್ಧಕ್ಕೆ ರೈಲು ನಿಲ್ಲಿಸಿ, ನಂತರ ರೈಲಿನಿಂದ ಕೆಳಗಿಳಿದು ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿದ್ದು, 5 ವರ್ಷಗಳ ಹಿಂದಿನ ಘಟನೆಯ ಈ ವಿಡಿಯೋ ಈಗ ಮತ್ತೊಮ್ಮೆ ವೈರಲ್‌ ಆಗಿದೆ.

ಈ ವಿಚಿತ್ರ ಘಟನೆ 2019 ರಲ್ಲಿ ಮುಂಬೈನಲ್ಲಿ ನಡೆದಿದ್ದು, ಲೋಕೋ ಪೈಲಟ್‌ ಮೂತ್ರ ವಿಸರ್ಜಿಸಲು ಅರ್ಧಕ್ಕೆ ರೈಲು ನಿಲ್ಲಿಸಿದ್ದರು.
‘ಮಾಹಿತಿಯ ಪ್ರಕಾರ, ಲೋಕಲ್‌ ಟ್ರೈನ್ ಉಲ್ಹಾಸ್‌ ನಗರದಿಂದ ಮುಂಬೈಗೆ ಹೋಗುತ್ತಿತ್ತು, ಈ ಸಮಯದಲ್ಲಿ ತಾಂತ್ರಿಕ ದೋಷ ಅಥವಾ ತುರ್ತು ಕಾರಣಗಳಿಗಾಗಿ ಅಲ್ಲ, ಬದಲಾಗಿ ಮೂತ್ರ ವಿಸರ್ಜಿಸಲು ಲೋಕೋ ಪೈಲಟ್ ರೈಲು ನಿಲ್ದಾಣವನ್ನು ತಲುಪುವ ಮೊದಲೇ ರೈಲನ್ನು ನಿಲ್ಲಿಸಿದರು ಮತ್ತು ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿ ವಾಪಸ್‌ ಹೋಗಿದ್ದಾರೆ. ಫೆ.27ರಂದು ಹಂಚಿಕೊಂಡ ಈ ವಿಡಿಯೋದ ಘಟನೆ ಹಳೆಯದ್ದಾಗಿದ್ದು, 2019ರಲ್ಲಿ ಈ ಘಟನೆ ನಡೆದಿದೆ.

See also  ಸ್ಲೀಪರ್ ಕೋಚ್ ಬಸ್ ಟೆಂಪೋಗೆ ಡಿಕ್ಕಿ..! 8 ಮಕ್ಕಳು ಸೇರಿದಂತೆ 12 ಮಂದಿ ದುರ್ಮರಣ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget