ಕ್ರೈಂವೈರಲ್ ನ್ಯೂಸ್

ಸಿಂಹದ ಮರಿ ಸಾಕಿದ್ದ ಖ್ಯಾತ ಯೂಟ್ಯೂಬರ್‌ ಬಂಧನ..! ಪೊಲೀಸರು ಮನೆಗೆ ಭೇಟಿ ನೀಡಿದ ವೇಳೆ ಸ್ಪೋಟಕಗಳು ಪತ್ತೆ..!

ನ್ಯೂಸ್ ನಾಟೌಟ್ : ಮನೆಯಲ್ಲಿ ಅಕ್ರಮವಾಗಿ ಸಿಂಹದ ಮರಿಯನ್ನು ಸಾಕಿದ್ದ ಆರೋಪದಡಿ ಪಾಕಿಸ್ತಾನದ ಯೂಟ್ಯೂಬರ್‌ ರಜಾಬ್‌ ಬಟ್‌ ಎಂಬಾತನನ್ನು ಇತ್ತೀಚೆಗೆ ಲಾಹೋರ್‌ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.

ವಿವಾಹದ ಉಡುಗೊರೆಯಾಗಿ ರಜಾಬ್‌ ಈ ಸಿಂಹದ ಮರಿಯನ್ನು ಸ್ವೀಕರಿಸಿರುವುದಾಗಿ ವರದಿ ವಿವರಿಸಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ ನಲ್ಲಿ ರಜಾಬ್‌ ಹಲವಾರು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಬಹಿರಂಗವಾಗಿತ್ತು.
ಬಂಧಿತ ರಜಾಬ್‌ ನನ್ನು ವೈಯಕ್ತಿಕ ಬಾಂಡ್‌ ಮೇಲೆ ಬಿಡುಗಡೆಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ರಜಾಬ್‌ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಪಂಜಾಬ್‌ ವನ್ಯಜೀವಿ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದರು.

ರಜಾಬ್‌ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ, 223 ಕ್ಯಾಲಿಬರ್‌ ರೈಫಲ್‌ ಹಾಗೂ ಸ್ಫೋಟಕಗಳು ಪತ್ತೆಯಾಗಿದ್ದವು. ಸಿಂಹದ ಮರಿ ಕೂಡಾ ಇದ್ದಿದ್ದು ಪ್ರಕರಣ ದಾಖಲಾಗಿದೆ.

Click

https://newsnotout.com/2024/12/darshan-thugudeepa-kannada-news-hospital-and-discharged/
https://newsnotout.com/2024/12/5-rupees-coin-circulation-stops-by-rbi-by-the-direction-of-central-govt/
https://newsnotout.com/2024/12/kannada-news-mobile-phone-usage-issue-kananda-news-viral-maharastra/
https://newsnotout.com/2024/12/287-crore-kananda-news-lottery-viral-news-daily-star-brezil/
https://newsnotout.com/2024/12/telugu-bigboss-kannada-news-viral-news-mysore-v/
https://newsnotout.com/2024/12/16-dec-pavitra-gowda-released-from-jail-kannada-news-v/
https://newsnotout.com/2024/12/2025-kannada-news-russia-and-indian-are-visa-free-travelling-dd/

Related posts

ಬಾಂಗ್ಲಾ ಹಿಂಸಾಚಾರ: ಪ್ರಧಾನಿ ಪರಾರಿಯಾದ ಬಳಿಕ ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿ..! ಇಲ್ಲಿದೆ ವೈರಲ್ ವಿಡಿಯೋ

ಠಾಣೆ ಎದುರೇ ಎಸ್‌ ಐ ಪತ್ನಿ ಪತಿಯ ವಿರುದ್ಧ ಧರಣಿ..! ಅಹೋರಾತ್ರಿ ಧರಣಿಯ ಹಿಂದಿದೆ ವಿಚಿತ್ರ ಸ್ಟೋರಿ..!

ವಿಮೆ ಹಣ ಪಡೆಯಲು ತನ್ನ ಎರಡೂ ಕಾಲುಗಳನ್ನೂ ಕತ್ತರಿಸಿಕೊಂಡದ್ದೇಗೆ ಆ ವ್ಯಕ್ತಿ..? ಏನಿದು ವಿಚಿತ್ರ ಪ್ರಕರಣ..?