ಪುತ್ತೂರು: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಅ.30ರಂದು ದರ್ಬೆತ್ತಡ್ಕದಲ್ಲಿ ನಡೆದಿದೆ. ದರ್ಬೆತ್ತಡ್ಕ ನಿವಾಸಿ ಕೃಷಿಕ ಪುರುಷೋತ್ತಮ ಪೂಜಾರಿ (47 )ರವರು ಮೃತಪಟ್ಟವರು. ಪುರುಷೋತ್ತಮ ಪೂಜಾರಿ ಅವರು ಸಂಜೆ ಮನೆಯೊಳಗಿದ್ದ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು ತಕ್ಷಣ ಅವರನ್ನು ಮನೆ ಮಂದಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆ ಅವರು ಮೃತಪಟ್ಟಿದ್ದರು.
previous post