ಕರಾವಳಿ

ಲಿಫ್ಟ್ ನಲ್ಲಿ ಸಿಲುಕಿ ಶಾಲಾ ಶಿಕ್ಷಕಿಯ ದೇಹ ಛಿದ್ರ..ಛಿದ್ರ

ನ್ಯೂಸ್ ನಾಟೌಟ್ : ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ವಾಣಿಜ್ಯನಗರಿ ಮುಂಬೈನಲ್ಲಿ ನಡೆದಿದೆ.

ಮುಂಬೈನ ವೆಸ್ಟ್ ಮಲ್ನಾಡ್  ಸಮೀಪದ ಸೇಂಟ್ ಮೆರಿಸ್ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಈ ದುರಂತ ನಡೆದಿದ್ದು ಮೃತ ಶಿಕ್ಷಕಿಯನ್ನು ೨೬ ವರ್ಷದ ಗಿನೆಲ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ. ಶುಕ್ರವಾರ (ಸೆ.೧೬) ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಿಕ್ಷಕಿ ಗಿನೆಲ್ ಲಿಫ್ಟ್‌ ಗೆ  ಸಂಪೂರ್ಣವಗಿ ಪ್ರವೇಶಿಸುವುದಕ್ಕೂ ಮೊದಲೇ ಲಿಫ್ಟ್ ಬಾಗಿಲು ಹಾಕಿಕೊಂಡಿದೆ. ಪರಿಣಾಮ ಗಿನೆಲ್ ಕಾಲು ಲಿಫ್ಟ್ ಒಳಗಡೆ ದೇಹ ಸಂಪೂರ್ಣ ಹೊರಗಡೆ ಬಾಕಿಯಾಗಿದೆ. ಅಲ್ಲದೇ ಮುಂದೆ ೭ನೇ ಮಹಡಿಗೆ ಲಿಫ್ಟ್ ಸಾಗಿದ್ದು, ಈಕೆಯನ್ನು ಜೊತೆಗೆ ಎಳೆದೊಯ್ದಿದೆ. ಪರಿಣಾಮ ಲಿಫ್ಟ್ ಗೆ ಸಿಲುಕಿ ಗಿನೆಲ್ ದೇಹ ನಜ್ಜುಗುಜ್ಜಾಗಿದೆ. ಮಧ್ಯಾಹ್ನ ೧ ರಿಂದ ಎರಡು ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಪ್ರಾಥಮಿಕ ಶಾಲೆ ಟೀಚರ್ ಆಗಿದ್ದ ಗಿನೆಲ್ ಕಟ್ಟಡದ ೬ನೇ ಮಹಡಿಯಲ್ಲಿ ತರಗತಿ ಮುಗಿಸಿ ೨ನೇ ಮಹಡಿಯಲ್ಲಿರುವ ಸ್ಟಾಪ್ ರೂಮ್‌ಗೆ ಬರಲು ಲಿಫ್ಟ್ ಬಳಿ ಸಮೀಪಿಸಿದ್ದರು. ಈ ವೇಳೆ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ. ನೆಚ್ಚಿನ ಟೀಚರ್ ಅನ್ನು ಕಳೆದುಕೊಂಡ ವಿದ್ಯಾರ್ಥಿಗಳ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿತು.

Related posts

ಪುತ್ತೂರು:ಹೊಳೆಗೆ ಈಜಲೆಂದು ಹೋಗಿ ನೀರು ಪಾಲಾದ ಯುವಕ ಶವವಾಗಿ ಪತ್ತೆ,ಮನೆ ಮಗನನ್ನು ಕಳೆದುಕೊಂಡು ಕಣ್ಣೀರಾದ ಕುಟುಂಬ

ಕೇರಳದ ಭೂಕುಸಿತ ಉಲ್ಲೇಖಿಸಿ ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..! ಅಮಾವಾಸ್ಯೆಯ ಬಳಿಕ ಎಲ್ಲವೂ ಬದಲಾಗುತ್ತಾ..?

ಪ್ರವೀಣ್‌ ನೆಟ್ಟಾರ್‌ ಹತ್ಯೆ ನಡೆಸಿದ್ದು ಇದೇ ಕಾರಣಕ್ಕೆ..! ಎನ್‌ಐಎ ಹೇಳಿದ ಸ್ಫೋಟಕ ಸತ್ಯ