ಜೀವನಶೈಲಿ

ಸಿಹಿ ಕುಂಬಳಕಾಯಿ ಬೀಜವನ್ನು ಬಿಸಾಡುತ್ತಿದ್ದೀರಾ?ಅದರ ಪ್ರಯೋಜನಗಳನ್ನು ತಿಳಿದುಕೊಂಡರೆ ಮತ್ತೆಂದೂ ಎಸೆಯುವುದಕ್ಕೆ ಮನಸ್ಸೇ ಬಾರದು

331

ನ್ಯೂಸ್ ನಾಟೌಟ್: ಹಿತ್ತಲೆ ಗಿಡ ಮದ್ದಲ್ಲ , ಕೆಲವೊಂದು ಸಲ ನಾವದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.ಎಷ್ಟೋ ಸಲ ವಸ್ತುಗಳ ಬೆಲೆ ತಿಳಿಯದೇ ನಾವು ನಿಷ್ಪ್ರಯೋಜಕ ಎಂದು ಭಾವಿಸುತ್ತೇವೆ.ಆದರೆ ಉಪಯೋಗಕ್ಕೆ ಬಾರದೇ ಇರುವಂತಹ ವಸ್ತುಗಳಿಂದಲೇ ಹಲವು ಪ್ರಯೋಜನಗಳನ್ನು ಪಡಿಬಹುದು ಅನ್ನೋದಕ್ಕೆ ಸಿಹಿ ಕುಂಬಳ ಕಾಯಿ ಬೀಜವೇ ಒಂದು ಉದಾಹರಣೆ.ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದ್ದು,ಇದನ್ನು ಸಾಂಬಾರ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕುಂಬಳಕಾಯಿಯನ್ನು ಸಾಂಬಾರ್, ಪಲ್ಯಗಳಲ್ಲಿ ಬಳಸಿದ್ರೆ ಅದರ ಬೀಜಗಳಿಂದಲೂ ಹಲವಾರು ಪ್ರಯೋಜನಗಳಿವೆ.ಅದೇನೆಂದು ತಿಳಿಯೋಣ ಬನ್ನಿ…

ಪೋಷಕಾಂಶ ಸಮೃದ್ದ:

ಕುಂಬಳಕಾಯಿಯಷ್ಟೇ ಅದರ ಬೀಜಗಳು ಕೂಡಾ ವಿಟಮಿನ್-ಸಿ, ವಿಟಮಿನ್-ಇ, ಕ್ಯಾಲೋರಿ, ಪ್ರೋಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣ, ಸೋಡಿಯಂ ಮತ್ತು ಫೋಲೇಟ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.ದೈನಂದಿನ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸುವುದು ಆರೋಗ್ಯಕರ ಎಂದು ಕ್ಲಿನಿಕಲ್ ಪೌಷ್ಟಿಕತಜ್ಞೆ ಲಿಮಾ ಮಹಾಜನ್ ಸೂಚಿಸುತ್ತಾರೆ. ಕುಂಬಳಕಾಯಿ ಬೀಜಗಳನ್ನು 100 ° C ನಲ್ಲಿ ಹುರಿದು ಸಲಾಡ್‌ಗಳು ಅಥವಾ ಸೂಪ್‌ಗಳ ಮೇಲೆ ಹಾಕಬಹುದು ಅಥವಾ ಹಣ್ಣುಗಳು ಮತ್ತು ಡ್ರೈಫ್ರೂಟ್ಸ್‌ಗಳೊಂದಿಗೆ ತಿನ್ನಬಹುದು.ಹೀಗೆ ಆಗಾಗ ನಾವು ಸೇವಿಸುತ್ತಿದ್ದರೆನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಒತ್ತಡ ಮುಕ್ತ:

ದೈನಂದಿನ ಜೀವನದಲ್ಲಿ ಮನುಷ್ಯನಿಗೆ ಒತ್ತಡ ಅನ್ನುವುದು ಮಾಮೂಲಿಯಾಗಿ ಬಿಟ್ಟಿದೆ.ನೀವು ಒತ್ತಡ ಮುಕ್ತವಾಗಿರಲು ಕುಂಬಳಕಾಯಿ ಬೀಜಗಳನ್ನು ಸೇವಿಸಬಹುದು. ಈ ಬೀಜವು ಟ್ರಿಪ್ಟೊಫಾನ್ ಎಂಬ ಅಂಶವನ್ನು ಹೊಂದಿದ್ದು, ಖಿನ್ನತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಥೈರಾಯ್ಡ್ ಗೂ ರಾಮಬಾಣ:

ಥೈರಾಯ್ಡ್ ಸಮಸ್ಯೆ ಇರುವವರು ಅನೇಕ ಮದ್ದುಗಳನ್ನು ಮಾಡುತ್ತಿರುತ್ತಿರುತ್ತಾರೆ.ಆದರೆ ಸಿಹಿ ಕುಂಬಳ ಕಾಯಿ ಬೀಜ ಸೇವಿಸಿದರೆ ಥೈರಾಯ್ಡ್ ಸಮಸ್ಯೆ ಹೋಗುತ್ತದೆ ಎಂಬುದು ಅಭಿಪ್ರಾಯ.ಕುಂಬಳಕಾಯಿ ಬೀಜಗಳಲ್ಲಿ ಸತು, ಸೆಲೆನಿಯಮ್ ಮತ್ತು ಕಬ್ಬಿಣ ಸಮೃದ್ಧವಾಗಿದ್ದು,ಪ್ರತಿದಿನ ಈ ಬೀಜಗಳನ್ನು ಸೇವಿಸುವುದು ನಿಮಗೆ ಸಹಕಾರಿಯಾಗಬಲ್ಲದು.

ಕಾಂತಿಯುತ ಚರ್ಮಕ್ಕೂ ಒಳ್ಳೆಯದು:

ಇದೀಗ ಚಳಿಗಾಲದ ಸಮಯವಾದುದರಿಂದ ಚರ್ಮದ ಸಮಸ್ಯೆ ಆಗಾಗ ಕಾಡುತ್ತಿರುತ್ತದೆ.ಕುಂಬಳಕಾಯಿ ಬೀಜಗಳು ಜೀವಕೋಶಗಳ ನವೀಕರಣ ಮತ್ತು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಸಹ ಹೊಂದಿದೆ, ಇದು ಸ್ಪಷ್ಟ ಮತ್ತು ದೋಷರಹಿತ ಚರ್ಮವನ್ನು ಪಡೆಯಲು ಸಹಕಾರಿಯಾಗಿದೆ.ಹಾಗಾಗಿಇದನ್ನು ಮಹಿಳೆಯರು ಹಾಗೂ ಪುರುಷರು ನಿಯಮಿತವಾಗಿ ಸೇವಿಸಬಹುದು.

See also  ಕೇರಳ ಮೂಲದ ಟ್ಯಾಕ್ಸಿ ಚಾಲಕನಿಗೆ 50 ಕೋಟಿ ರೂ. ಅಬುಧಾಬಿ ಬಂಪರ್ ಲಾಟರಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget