ಕ್ರೈಂವೈರಲ್ ನ್ಯೂಸ್

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಪತ್ನಿಯರಿಂದಲೇ ದುರಂತ ಅಂತ್ಯ! ಬರ್ಬರವಾಗಿ ಕೊಲೆಯಾಗಿದ್ದೇಕೆ ಆತ..?

ನ್ಯೂಸ್ ನಾಟೌಟ್: ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯರಿಂದಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಛಾಪ್ರಾ ಜಿಲ್ಲೆಯ ಮಹಿಳೆಯರು ಗಂಡನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಇತೀಚೆಗೆ ಬಕ್ರೀದ್‌ ಹಬ್ಬಕ್ಕೆ ಮನೆಗೆ ಮರಳಿದಾಗ ಆತನ ಕೊಲೆಯಾಗಿದೆ. ಪೊಲೀಸರು ಸಲ್ಮಾ ಹಾಗೂ ಅಮೀನಾ ಇಬ್ಬರೂ ಪತ್ನಿಯರನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಬೆಡ್ವಾಲಿಯಾ ರಾಯಪುರ ನಿವಾಸಿ ಅಲಂಗೀರ್ ಅನ್ಸಾರಿ (45), ಸರನ್ ಜಿಲ್ಲೆಯ ಚಿಂತಮಂಗಂಜ್ ಗ್ರಾಮದ ನಿವಾಸಿ ಸಲ್ಮಾಳೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಮದುವೆಯಾದ 10 ವರ್ಷಗಳ ವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಅಲಂಗೀರ್‌ ಮತ್ತು ಸಲ್ಮಾ ನಡುವೆ ಮನಸ್ತಾಪ ಶುರುವಾಗಿತ್ತು. ಹಾಗಾಗಿ ಸಲ್ಮಾ ಪತಿಯನ್ನ ತೊರೆದು ಬೇರೆ ಸ್ಥಳದಲ್ಲಿ ವಾಸ ಮಾಡಿಕೊಂಡಿದ್ದಳು. ಕಳೆದ 6 ತಿಂಗಳ ಹಿಂದೆ ಅಲಂಗೀರ್‌ ದೆಹಲಿಗೆ ಬಂದಿದ್ದಾಗ ಬಂಗಾಳ ಮೂಲದ ಮಹಿಳೆ ಅಮಿನಾಳನ್ನ ಮದುವೆಯಾಗಿದ್ದ.

ಕೆಲವು ದಿನಗಳ ಹಿಂದೆ ದೆಹಲಿಗೆ ಬಂದಿದ್ದ ಸಲ್ಮಾ, ತನ್ನ ಗಂಡನ 2ನೇ ಹೆಂಡತಿ ಅಮೀನಾಳನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಳು, ಇಬ್ಬರೂ ಒಟ್ಟಿಗೆ ವಾಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಜುಲೈ 9ರಂದು ಬಕ್ರೀದ್‌ ಹಬ್ಬಕ್ಕೆ ತಮ್ಮ ಗ್ರಾಮಕ್ಕೆ ಇಬ್ಬರು ಪತ್ನಿಯರೂ ಗಂಡನ ಮನೆಗೆ ಬಂದಿದ್ದರು. ಈ ನಡುವೆ ಯಾವುದೋ ವಿಚಾರಕ್ಕೆ ಮೂವರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸಲ್ಮಾ ಚಾಕು ತೆಗೆದು ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.
ತಕ್ಷಣ ಅಲಂಗೀರ್‌ ನನ್ನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಸಲ್ಮಾ-ಅಮೀಳಾ ಇಬ್ಬರನ್ನೂ ಬಂಧಿಸಿದ್ದಾರೆ. ಅಲಂಗೀರ್‌ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಸುಳ್ಯ: ಪಯಸ್ವಿನಿ ನದಿಗೆ ವ್ಯಕ್ತಿ ಹಾರಿರುವ ಶಂಕೆ, ಭಸ್ಮಡ್ಕ ಬಳಿ ಚಪ್ಪಲಿ ಪತ್ತೆ, ಪೊಲೀಸ್ ದೂರು ದಾಖಲು

ಪಾತ್ರೆಯೊಳಗೆ ತಲೆ ಸಿಲುಕಿ ಪರದಾಡಿದ 4 ವರ್ಷದ ಬಾಲಕ! ಬಾಲಕನಿಗೆ ಮೊಬೈಲ್ ಕೊಟ್ಟು ಪೊಲೀಸರು ಆತನನ್ನು ರಕ್ಷಿಸಿದ್ದೇಗೆ? ಇಲ್ಲಿದೆ ವೈರಲ್ ವಿಡಿಯೋ

ದಲಿತರು ದೇವಸ್ಥಾನದ ಕಾಂಪೌಂಡ್‌ ಒಳಗೆ ಪ್ರವೇಶ ಮಾಡಿದ್ದಕ್ಕೆ ₹2.5 ಲಕ್ಷ ದಂಡ..! ಅಶುದ್ಧವಾಗಿದೆ ಎಂದು ಪೂಜೆ ನಿಲ್ಲಿಸಿ ದೇವಸ್ಥಾನಕ್ಕೆ ಬೀಗ ಹಾಕಿದ ಗ್ರಾಮಸ್ಥರು..!