ಕರಾವಳಿವಾಣಿಜ್ಯ

ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್

ನ್ಯೂಸ್ ನಾಟೌಟ್: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಚಂದಾದಾರರಿಗೆ ಸುಲಭವಾಗಿ ವಾಟ್ಸ್ಯಾಪ್ ಮೂಲಕ 24*7 ಸಂವಾದ ಮಾಡಲು ಬುಧವಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ವಾಟ್ಸ್ಯಾಪ್ ಬಿಸಿನೆಸ್ ಮ್ಯಾನೇಜಿಂಗ್/ ಮೆಸೇಜಿಂಗ್‌ ನಿರ್ದೇಶಕ ರವಿ ಗರ್ಗ್ ತಿಳಿಸಿದ್ದಾರೆ.

ಹೊಸ ಎಲ್ಐಸಿ ವಾಟ್ಸ್ಯಾಪ್ ಬಳಕೆಯಿಂದ ಚಾಟ್‌ಬಾಟ್‌ನಲ್ಲಿ ಸಂಬಂಧಿಸಿದ ಪಾಲಿಸಿಗಳಿಗೆ ಮಾಹಿತಿ ಮತ್ತು ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಸಾಲದ ಅರ್ಹತೆ, ಹಣ ಮರುಪಾವತಿ, ಬೋನಸ್ ಮಾಹಿತಿ, ಪ್ರೀಮಿಯಂ ಬಾಕಿ ನವೀಕರಣದ ದಿನಾಂಕ ಮೊದಲಾದ11 ಸೇವೆಗಳ ಮಾಹಿತಿಯನ್ನು ನೇರವಾಗಿ ವಾಟ್ಸ್ಯಾಪ್‌ನಲ್ಲಿ ಪಡೆಯಬಹುದಾಗಿದೆ.

ಪಾಲಿಸಿದಾರರು ಮೊದಲು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ನ್ನುಓಪನ್ ಮಾಡಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8976862090 ನಂಬರ್‌ಗೆ ಹಾಯ್ ಎಂದು ಕಳುಹಿಸಿದರೆ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಒಟಿಪಿಯನ್ನು ನಮೂದಿಸಿದ ನಂತರ ಓಪನ್‌ ಮಾಡಿದರೆ ಎಲ್‌ಐಸಿ ಸೇವೆಗಳನ್ನು ಆಯ್ಕೆ ಮಾಡಬಹುದಾಗಿದೆ.

Related posts

ಅರಂತೋಡು: ಅಡ್ಯಡ್ಕದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ, ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಶಂಕೆ

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡೋತ್ಸವ

ಬಂಟ್ವಾಳ: ಸರಣಿ ಕಳವು ಪ್ರಕರಣ – ಸಾರ್ವಜನಿಕರಿಂದ ದೂರು, ಆರೋಪಿಗಳ ಬಂಧನ