ಕರಾವಳಿಬೆಂಗಳೂರುವೈರಲ್ ನ್ಯೂಸ್

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಸಂಸ್ಥೆಯಿಂದ 200 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿಭಾಗವು 200 ಜೂನಿಯರ್ ಅಸಿಸ್ಟೆಂಟ್‌ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು LIC HFL ನ ಅಧಿಕೃತ ವೆಬ್‌ಸೈಟ್ lichousing.com ಮುಖಾಂತರ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ.

ಲೈಫ್ ಕಾರ್ಪೊರೇಶನ್ ಆಫ್ ಇಂಡಿಯಾ (LIC – Life Corporation of India) ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (HFL -Housing Finance Limited ) ಜೂನಿಯರ್ ಅಸಿಸ್ಟೆಂಟ್‌ಗಳ ನೇಮಕಾತಿಗಾಗಿ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು LIC HFL ನ ಅಧಿಕೃತ ವೆಬ್‌ಸೈಟ್ lichousing.com ನಲ್ಲಿ 200 ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್ 14, 2024 LIC ಜೂನಿಯರ್ ಅಸಿಸ್ಟೆಂಟ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. LIC HFL ಜೂನಿಯರ್ ಅಸಿಸ್ಟೆಂಟ್ ಪರೀಕ್ಷೆ ದಿನಾಂಕವು ಸೆಪ್ಟೆಂಬರ್ 24 ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

LIC HFL ಜೂನಿಯರ್ ಅಸಿಸ್ಟೆಂಟ್ ಪರೀಕ್ಷೆ 2024 ಪ್ರವೇಶ ಕಾರ್ಡ್ ಬಿಡುಗಡೆ ದಿನಾಂಕವು ಪರೀಕ್ಷೆಗೆ 7 ರಿಂದ 14 ದಿನಗಳ ಮೊದಲು ಎಂದು ಹೇಳಲಾಗಿದೆ. LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಜೂನಿಯರ್ ಅಸಿಸ್ಟೆಂಟ್‌ಗಳ 200 ಹುದ್ದೆಗಳಿಗೆ ನೇಮಕಾತಿ ಅಭಿಯಾನವನ್ನು ನಡೆಸುತ್ತಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ರಾಜ್ಯವಾರು ಖಾಲಿ ಹುದ್ದೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 28 ವರ್ಷ ವಯಸ್ಸಿನವರಾಗಿರಬೇಕು, ಅಂದರೆ ಅಭ್ಯರ್ಥಿಗಳು 02.07.1996 ಕ್ಕಿಂತ ಮೊದಲು ಮತ್ತು 01.07.2003 ಕ್ಕಿಂತ ನಂತರ ಜನಿಸಿರಬೇಕು ಎನ್ನಲಾಗಿದೆ. ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು (ಕನಿಷ್ಠ ಒಟ್ಟು 60 % ಅಂಕಗಳು). ಭಾರತದ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ ಹೊಂದಿದರೂ ಅರ್ಹರು ಎನ್ನಲಾಗಿದೆ. ದೂರ ಶಿಕ್ಷಣ/ಅರೆಕಾಲಿಕವಾಗಿ ಪೂರ್ಣಗೊಳಿಸಿದ ಪದವಿ ಕೋರ್ಸ್‌ಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಕ್ತ ಶಿಕ್ಷಣ ಅರ್ಹತೆ ಅಲ್ಲ ಎಂದು ಸಂಸ್ಥೆ ತಿಳಿಸಿದೆ.

Click

https://newsnotout.com/2024/07/mangaluru-kannada-news-commisioner-kannada-news-viral-news/
https://newsnotout.com/2024/07/melukote-cheluvanarayana-swami-kannada-news-land-scam/
https://newsnotout.com/2024/07/bike-kannada-news-humanity-and-theft-kannada-news-bengaluru/
https://newsnotout.com/2024/07/14-hours-work-kananda-news-protest-kannada-news-viral-video-job-issue-at-bengaluru/

Related posts

ಬಸದಿಯಿಂದ ಜೈನ ಮುನಿ ನಿಗೂಢ ನಾಪತ್ತೆ..! ಈ ನಾಪತ್ತೆಯ ಬಗ್ಗೆ ಭಕ್ತರು ಹೇಳಿದ್ದೇನು?

ನಿರ್ಭಯ ಪ್ರಕರಣ ನೆನಪಿಸಿದ ಬೆಂಗಳೂರಿನ ಘಟನೆ! ಪಾರ್ಕ್‌ನಲ್ಲಿ ಕುಳಿತಿದ್ದ ಮಹಿಳೆಯನ್ನು ಕಾರಿನೊಳಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ!

ಬೆಳ್ತಂಗಡಿ: ಆತನ ಮೂಗನ್ನೇ ಕಚ್ಚಿ ತುಂಡರಿಸಿದ ಸ್ನೇಹಿತ..! ಹೊಸ ವರ್ಷಾಚರಣೆ ಅಮಲಿನಲ್ಲಿ ನಡೆಯಿತು ಅನಾಹುತ