ಕರಾವಳಿಸುಳ್ಯ

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಮಾಹಿತಿ ಕಾರ್ಯಗಾರ

399

ನ್ಯೂಸ್ ನಾಟೌಟ್ : ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಕಾನೂನು ಸಲಹಾ ಸಮಿತಿಯ ವತಿಯಿಂದ ಸುಳ್ಯದ ಶ್ರೀ ಶಾರದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಗಾರವು ಇಂದು ನಡೆಯಿತು.

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ೪ನೇ ವರ್ಷದ ಕಾನೂನು ವಿದ್ಯಾರ್ಥಿನಿ ವೃಂದಾಪ್ರಕಾಶ್ ‘ಬಾಲಕಾರ್ಮಿಕ ನಿರ್ಮೂಲನಾ ಕಾಯ್ದೆ’ ಮತ್ತು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿ ರೇವತಿ. ಪಿ. ಎಮ್ ರವರು ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ’ ಎಂಬ ವಿಷಯಗಳ ಬಗ್ಗೆ ಕಾನೂನು ಮಾಹಿತಿ ನೀಡಿದರು. ಈ ವೇಳೆ ಕಾನೂನು ಉಪನ್ಯಾಸಕ ಜಯರಾಮ್. ವೈ. ಪ್ರಚಲಿತ ಕಾನೂನು ಕುರಿತು ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದು, ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.

See also  ಸುಳ್ಯ: ನಿಯಂತ್ರಣ ಕಳೆದುಕೊಂಡ ಚಾಲಕ..! ಸೋಣಂಗೇರಿಯಲ್ಲಿ ಕಾರುಗಳ ನಡುವೆ ಅಪಘಾತ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget